Widgets Magazine

ಕೊರೊನಾ ಕರ್ಫ್ಯೂ : ಹೆಸರು ನೊಂದಾಯಿಸಿದರೆ ಸಿಗುತ್ತೆ ಊಟ

ಕಾರವಾರ| Jagadeesh| Last Modified ಶನಿವಾರ, 28 ಮಾರ್ಚ್ 2020 (16:00 IST)
ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವ ಸರಕಾರ ಇದೀಗ ಆಹಾರ ವಿತರಣೆಗೆ ಕ್ರಮ ಕೈಗೊಂಡಿದೆ.

ತುರ್ತು ಆಹಾರದ ಅಗತ್ಯವಿದ್ದವರಿಗೆ ಜಿಲ್ಲಾಡಳಿತದಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಸಿ ಆಹಾರದ ವಿತರಿಸುವ  ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಾರವಾರದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ತಿಳಿಸಿದ್ದಾರೆ.

ತುರ್ತು ಆಹಾರದ ಅಗತ್ಯವಿದ್ದಂತಹ  ಸಾರ್ವಜನಿಕರು  ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಾ. ರಾಜೇಂದ್ರ ಬೇಕಲ್ (ಮೊಬೈಲ್   ಸಂಖ್ಯೆ: 9880301250 )  ಅವರನ್ನು ಸಂಪರ್ಕಿಸುವ  ಮೂಲಕ ತಮ್ಮ  ಹೆಸರನ್ನು ನೊಂದಾಯಿಸಬೇಕಾಗಿರುತ್ತದೆ.

ಹೆಸರು ನೋಂದಣಿ ಮಾಡಿಸಿಕೊಂಡವರಿಗೆ  ಸಮೀಪದ  ಅಂಗನವಾಡಿಗಳ ಮೂಲಕ ಆಹಾರ ಒದಗಿಸಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :