Widgets Magazine

5 ಜನ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕೊರೊನಾ

ಕೊಪ್ಪಳ| Jagadeesh| Last Modified ಶುಕ್ರವಾರ, 26 ಜೂನ್ 2020 (20:31 IST)
ಆರೋಗ್ಯ ಇಲಾಖೆಯ ಐವರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊಪ್ಪಳದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಐವರು ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14 ಕೊರೊನಾ ಸೋಂಕು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕುಷ್ಟಗಿ ತಾಲ್ಲೂಕಿನ ತಾವರಗೇರಾ ಆರೋಗ್ಯ ಸಿಬ್ಬಂದಿ 30  ವರ್ಷದ ಮಹಿಳೆ, 23  ವರ್ಷದ ಮಹಿಳೆ, 24 ವರ್ಷದ ಇಬ್ಬರಲ್ಲಿ 34  ವರ್ಷದ ವ್ಯಕ್ತಿಗೆ ಸೊಂಕು ಧೃಢಪಟ್ಟಿದೆ. ಕುಷ್ಟಗಿ ತಾಲ್ಲೂಕಿನ ದೊಣ್ಣೆಗುಡ್ಡ ಗ್ರಾಮದ 21 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಗ್ರಾಮಕ್ಕೆ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ.

ಕುಕನೂರು ಪಟ್ಟಣದಲ್ಲಿ 8 ವರ್ಷದ ಬಾಲಕಿಗೆ ಸೋಂಕು ಧೃಢವಾಗಿದ್ದು, ಯಾವುದೇ ಪ್ರಯಾಣ ಹಿನ್ನೆಲೆ ಇರುವುದಿಲ್ಲ. ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದ 30  ವರ್ಷ ವ್ಯಕ್ತಿಗೆ ಸೋಂಕು ಧೃಢವಾಗಿದ್ದು, ಬಳ್ಳಾರಿಯಿಂದ ಆಗಮಿಸಿದ್ದಾನೆ. ಕಂಪಸಾಗರ ಗ್ರಾಮದಲ್ಲಿ 30  ವರ್ಷ ವ್ಯಕ್ತಿಗೂ ಸೊಂಕು ಧೃಢವಾಗಿದ್ದು, ಹೊಸಪೇಟೆಯಿಂದ ಆಗಮಿಸಿದ್ದಾನೆ. ತಿಗರಿ ಗ್ರಾಮದ 26 ವರ್ಷದ ವ್ಯಕ್ತಿಗೂ ಸಹ ಸೋಂಕು ಧೃಢವಾಗಿದ್ದು, ಯಾವುದೇ ಪ್ರಯಾಣ ಮಾಡಿಲ್ಲ.

ಯಲಬುರ್ಗಾ ತಾಲ್ಲೂಕಿನ ಶಿರೂರು ಗ್ರಾಮದ 38  ವರ್ಷದ ವ್ಯಕ್ತಿಗೆ ಸೊಂಕು ಧೃಢವಾಗಿದ್ದು, ಯಾವುದೇ ಪ್ರಯಾಣ ಮಾಡಿಲ್ಲ. ಗಂಗಾವತಿ ನಗರದಲ್ಲಿ 24 ವರ್ಷದ ಯುವಕನಿಗೆ ಸೊಂಕು ಧೃಢವಾಗಿದ್ದು ಮುಂಬೈಯಿಂದ ಆಗಮಿಸಿದ್ದಾನೆ. ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದ 25  ವರ್ಷದ ವ್ಯಕ್ತಿಗೆ ಸೊಂಕು ಧೃಢವಾಗಿದ್ದು, ಬಳ್ಳಾರಿಯ ಜೆಎಸ್‌ಡಬ್ಲ್ಯೂ ಕಂಪನಿಯಿಂದ ಆಗಮಿಸಿದ್ದಾನೆ.

ಮೈನಳ್ಳಿ ಗ್ರಾಮದ 40  ವರ್ಷದ ವ್ಯಕ್ತಿಗೆ ಸೊಂಕು ಧೃಢವಾಗಿದ್ದು, ಬಳ್ಳಾರಿಯಿಂದ ಆಗಮಿಸಿದ್ದಾನೆ. ಒಟ್ಟಾರೆ ಜಿಲ್ಲೆಯಲ್ಲಿ 80 ಕೊರೊನಾ ಕೇಸ್‌ಗಳ ಪೈಕಿ 20 ಜನ ಗುಣಮುಖರಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, 57 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


 
ಇದರಲ್ಲಿ ಇನ್ನಷ್ಟು ಓದಿ :