Widgets Magazine

ಕೊರೊನಾ ವೈರಸ್ ತಪಾಸಣೆಗೆ ಹೆದರಿ ಆಸ್ಪತ್ರೆಯಿಂದ ಓಡಿಹೋದ ದಂಪತಿ

ತಿರುವನಂತಪುರಂ| Jagadeesh| Last Modified ಶನಿವಾರ, 14 ಮಾರ್ಚ್ 2020 (17:17 IST)
ಕೊರೊನಾ ವೈರಸ್ ತಪಾಸಣೆಗೆ ಒಳಪಡಬೇಕಿದ್ದ ಅಮೆರಿಕಾ ಪ್ರಜೆಗಳು ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.

ಕೇರಳದ ಕೊಚ್ಚಿಗೆ ಬಂದಿದ್ದ ದಂಪತಿಯು ಚಿಕಿತ್ಸೆಗೆ ಬಂದಿದ್ದರು. ದಂಪತಿಯಲ್ಲಿ ಒಬ್ಬರಿಗೆ ಕೊರೊನಾ ಲಕ್ಷಣದ ಜ್ವರ ಇತ್ತು.
ಹೀಗಾಗಿ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು.

ಆದರೆ ಏಕಾಏಕಿಯಾಗಿ ಆ ದಂಪತಿ ಕೊರೊನಾ ತಪಾಸಣೆಗೆ ಒಳಗಾಗದೇ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ಈಗ ಪೊಲೀಸರು ಅಮೆರಿಕಾ ಪ್ರಜೆಗಳನ್ನು ಕೊಚ್ಚಿಯಲ್ಲಿ ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :