ಕಣ್ಣಿನ ಚಿಕಿತ್ಸೆಗೆ ಒಳಗಾದ ಬಾಲಕ ಸಾವು; ವೈದ್ಯ ಅರೆಸ್ಟ್

ಬೆಂಗಳೂರು| pavithra| Last Modified ಭಾನುವಾರ, 15 ಡಿಸೆಂಬರ್ 2019 (11:50 IST)
ಬೆಂಗಳೂರು : ಕಣ್ಣಿನ ಚಿಕಿತ್ಸೆಗೆ ಒಳಗಾದ ಬಾಲಕ ಸಾವನಪ್ಪಿರುವ ಘಟನೆ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ನಡೆದಿದೆ.ಶಂಕರ್ ಮೃತಪಟ್ಟ ಬಾಲಕ. ತಮಿಳುನಾಡಿನ ಮೂಲದ ಈ ಬಾಲಕನಿಗೆ ಬಲಗಣ್ಣಿನಲ್ಲಿ ಸಮಸ್ಯೆ ಇದ್ದ ಕಾರಣ ಮಂಜುನಾಥ ಕಣ್ಣಿನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ನೀಡಲಾದ ಕೆಲವೇ ಗಂಟೆಗಳಲ್ಲಿ ಬಾಲಕ ಸಾವನಪ್ಪಿದ್ದಾನೆ.
ವೈದ್ಯರು ನೀಡಿದ ಓವರ್ ಡೋಸ್ ನಿಂದ ಬಾಲಕ ಸಾವನಪ್ಪಿದ್ದಾನೆ  ಎಂದು ಆತನ ಪೋಷಕರು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯನನ್ನು ಬಂಧಿಸಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :