ಜನಾರ್ದನ ರೆಡ್ಡಿಗೆ ಲೂಟಿ ಮಾಡು ಅಂತ ನಾವು ಹೇಳಿದ್ವಾ? ಎಂದು ಕೇಳಿದ ಸಿದ್ದರಾಮಯ್ಯ

ಚಿತ್ರದುರ್ಗ, ಶನಿವಾರ, 10 ನವೆಂಬರ್ 2018 (14:39 IST)

ಜನಾರ್ದನ ರೆಡ್ಡಿಗೆ ಲೂಟಿ ಮಾಡು, ಕಳ್ಳತನ ಮಾಡು ಅಂತಾ ನಾವು ಹೇಳಿಕೊಟ್ಟಿದ್ವಾ? ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಪ್ರಶ್ನೆ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ರೆಡ್ಡಿ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಕಾಂಗ್ರೆಸ್ ಕರ್ನಾಟಕದಲ್ಲಿ ಪ್ರಬಲವಾಗಿದೆ. ಸಮಾಜ ಛಿದ್ರ ಮಾಡುತ್ತಿರುವವರು ಬಿಜೆಪಿಯವರು ಹೊರತು ನಾವಲ್ಲ ಎಂದರು.

ನಾವು ಸಮಾಜ ಒಗ್ಗೂಡಿಸುತ್ತಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ಸಾಥ್ ವಿಕಾಸ್ ಅಂತಾ ಬಾಯಲ್ಲಿ ಮಾತ್ರ ಬಿಜೆಪಿಯವರು ಹೇಳುತ್ತಾರೆ. ಮನುಷ್ಯರನ್ನೇ ದ್ವೇಷ ಮಾಡೋರು‌ ಮತಾಂಧರು.  ಬಿಜೆಪಿ ಮನುಷ್ಯರನ್ನು ದ್ವೇಷ ಮಾಡುತ್ತೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಚರಿತ್ರೆ ಓದಿಕೊಳ್ಳದೆ‌ ಮಾತಾಡೋರ ಬಗ್ಗೆ ರಿಯಾಕ್ಟ್ ಮಾಡಲ್ಲ ಎಂದ ಸಿದ್ದರಾಮಯ್ಯ, ಅವನ್ಯಾವನೋ ಅನಂತಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕೆ ಅಂತಾನೆ ಎಂದು ವ್ಯಂಗ್ಯವಾಡಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಪು ಜಂಯತಿಗೆ ಸ್ಥಳೀಯ ಶಾಸಕ, ಮುಸ್ಲಿಂ ಮುಖಂಡ ಗೈರು

ಟಿಪ್ಪು ಸುಲ್ತಾನ್ ಜಂಯತಿಗೆ ಮುಸ್ಲಿಂ ಮುಖಂಡರೂ ಆಗಿರುವ ಶಾಸಕರೊಬ್ಬರು ಗೈರಾಗಿರುವ ಘಟನೆ ನಡೆದಿದ್ದು, ...

news

ಬೆಂಬಲ ಬೆಲೆಯಲ್ಲಿ ಉದ್ದಿನಕಾಳು ಖರೀದಿ: 15 ಖರೀದಿ ಕೇಂದ್ರಗಳ ಸ್ಥಾಪನೆ

ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉದ್ದಿನಕಾಳು ಖರೀದಿಗಾಗಿ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು ...

news

ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ಯಾಕೆ?

ಮಂಗಳೂರು : ಸಾಕಷ್ಟು ವಿರೋಧದ ನಡುವೆ ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿ ಆಚರಣೆ ಮಾಡಿರುವುದಕ್ಕೆ ಮುಂದಿನ ...

news

ಟಿಪ್ಪು ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಗೈರು: ಶಾಸಕ ಆಕ್ರೋಶ

ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಜಯಂತ್ಯುತ್ಸವಕ್ಕೆ ಸಿಎಂ, ಡಿಸಿಎಂ ಗೈರು ಹಾಜರಾಗಿರುವುದಕ್ಕ್ಲೆ ...