ನಾಯಿ- ನರಿಗಳಂತೆ ಮೈತ್ರಿ ಸರಕಾರದವರ ಕಚ್ಚಾಟ

ಹುಬ್ಬಳ್ಳಿ, ಶುಕ್ರವಾರ, 17 ಮೇ 2019 (17:24 IST)

ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಮ್ಮೆ ಸಿಎಮ್ ಆಗುವ ಅವಕಾಶ ಬಂದಿದೆ. ಮತದಾರರು ಭ್ರಷ್ಟ ಸಮ್ಮಿಶ್ರ ಸರ್ಕಾರ ಕಿತ್ತೊಗೆಯುತ್ತಾರೆ. ಹೀಗಂತ ಮಾಜಿ ಸಚಿವ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಹೇಳಿಕೆ ನೀಡಿದ್ದು, ಮೈತ್ರಿ ಸರಕಾರದವರು ರಸ್ತೆಗಳಲ್ಲಿ ನಾಯಿ- ನರಿಗಳಂತೆ ಕಚ್ಚಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಘನತೆಯೇ ಹೋಗಿದೆ. ಸಚಿವರು ಮತದಾರರನ್ನು ರೆಸಾರ್ಟ್‌ಗೆ ಕರೆಸಿ ಹಣದ ಆಮಿಷವೊಡ್ಡುತ್ತಿದ್ದಾರೆ. ಬಿಟ್ಟಿ ಹಣ ತಂದು ಮತ ಖರೀದಿಗೆ ಹೊರಟಿದ್ದಾರೆ ಎಂದು ದೂರಿದ್ರು.

ಸ್ವಾಭಿಮಾನಿ ಮತದಾರರು ಇವರನ್ನು ತಿರಸ್ಕರಿಸುತ್ತಾರೆ. ನನ್ನ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ನಾಲಿಗೆ ಮತ್ತು ಮಿದುಳಿಗೆ ಸಂಪರ್ಕವಿಲ್ಲ‌ ಎಂದು ಟೀಕೆ ಮಾಡಿದ್ರು.

ಹೊನ್ನಾಳಿ ಜನರು ನನ್ನ ದೇವರು, ನಂತರ ಯಡಿಯೂರಪ್ಪನವರು‌. ಡಿ.ಕೆ. ಶಿವಕುಮಾರ್ ಮತ್ತು‌ ಕುಮಾರಸ್ವಾಮಿ ಮೊದಲು ಕಚ್ಚಾಡಿದ್ರು. ಈಗ ಅಧಿಕಾರಕ್ಕಾಗಿ ಕುಚುಕು ಗೆಳೆಯರಾಗಿದ್ದಾರೆ. 37, 77 ಸೀಟು ಬಂದು ಗಾಂಚಾಲಿ ಮಾಡ್ತಾರೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಟ್ರ್ಯಾಟಜಿ ನಡೆಯಲ್ಲ. ತಿಪ್ಪರಲಾಗ ಹಾಕಲಿ, ತಲೆಕೆಳಗಾಗಿ ಶಿರ್ಶಾಸನ ಹಾಕಲಿ.
ಯಡಿಯೂರಪ್ಪಗೆ ಸರಿಸಾಟಿಯಾಗಲು ಸಾಧ್ಯವಿಲ್ಲ.  ವೀರಶೈವ ಲಿಂಗಾಯತರು ಯಾರಿಗೂ ಮರುಳಾಗಲ್ಲ‌ ಎಂದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಕೆಶಿ ವಿರುದ್ಧ ಕೈ ಮುಖಂಡರ ಅಸಮಧಾನ ಸ್ಫೋಟ

ಕುಂದಗೋಳಕ್ಕೆ ಯಾರು ಕಾಂಗ್ರೇಸ್ ನಾಯಕರು??? ಹೀಗಂತ ಕೈ ಪಡೆಯ ನಾಯಕರೇ ಸಾಮಾಜಿಕ ಜಾಲತಾಣದಲ್ಲಿ ಸಚಿವ ...

news

ನಳಿನ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ಖರ್ಗೆ ಖಡಕ್ ಎಚ್ಚರಿಕೆ

ರಾಜೀವ್ ಗಾಂಧಿ ಬಗ್ಗೆ ಸಂಸದ ನಳಿನ್ ಕುಮಾರ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ...

news

ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ; ಕೈ ಪಡೆ ಹೇಳಿದ್ದೇನು?

ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ನಡುವೆ ಕೈ ಪಡೆ ...

news

ಕಲಬುರಗಿಯಲ್ಲಿ ಡಿಸಿಎಂ ಮಾಡಿದ್ದೇನು?

ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೈ ಪಡೆ ವಿವಿಧ ಸಮುದಾಯಗಳ ಮೊರೆ ಹೋಗಿದೆ.