ಪ್ರವಾಹಕ್ಕೆ ಜನ ತತ್ತರ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೋಟಿ ರೂಪಾಯಿ ಪರಿಹಾರ

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (17:44 IST)

ರಾಜ್ಯದ ಪರಿಸ್ಥಿತಿಗೆ ಜನಸಾಮಾನ್ಯರು, ನಟರು ಸ್ಪಂದಿಸುತ್ತಿರುವಂತೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನೆರವಿಗೆ ಮುಂದಾಗಿದೆ.

ಮಂಗಳೂರು ಭಾಗದಲ್ಲಾದ ಪ್ರವಾಹದ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು 1 ಕೋಟಿ ರೂಪಾಯಿ ನೀಡಲು ನಿರ್ಧರಿಸಿದೆ.
 
ದೇವಸ್ಥಾನದ ನಿಧಿಯಿಂದ 1 ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಆಡಳಿತ ಮಂಡಳಿಯ ಸಭೆಯಲ್ಲಿ  ನಿರ್ಧಾರ ಕೈಗೊಳ್ಳಲಾಗಿದೆ. 
 
ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದ ಬಯಲು ಸೀಮೆಯ ಭಕ್ತರಿಗೆ ಪ್ರವಾಹದಿಂದ ಸಾಕಷ್ಟು ಸಂಕಷ್ಟವಾಗಿದೆ.  1 ಕೋಟಿ ಹಣವನ್ನು ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂಬುದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೀಪಿಕಾ – ಪ್ರಿಯಾಂಕ ನಡುವೆ ನಂಬರ್ 1 ಸ್ಥಾನಕ್ಕೆ ವಾರ್

ಬಾಲಿವುಡ್ ನಟಿಯರಾದ ಪ್ರಿಯಾಂಕ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ನಡುವೆ ದೇಶದ ನಂಬರ್ ಒನ್ ಹಿರೋಯಿನ್ ...

news

ಗೆಳತಿಯ ನೆಕೆಡ್ ಪೋಟೋ ಸಂಬಂಧಿಗಳಿಗೆ ಕಳಿಸಿದ ಭೂಪ

ಅವರಿಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿ ಕೊನೆಗೆ ಪ್ರೀತಿಯಲ್ಲಿ ...

news

‘ಅದು ಗೊತ್ತೇ ಇಲ್ಲ ಅಂತಂದ್ರು ಸಿದ್ದರಾಮಯ್ಯ’

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ತಮಗೆ ಗೊತ್ತಿಲ್ಲ ಅಂತ ...

news

ಲಡಾಖ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಂಭ್ರಮ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಅಲ್ಲದೇ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ...