Widgets Magazine

ಲಿಂಗಾಯತ ಎನ್ನುವ ಕಾರಣಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡಿಲ್ಲ ಎಂದ ಮಾಜಿ ಸಚಿವ!

ಬೆಂಗಳೂರು| Jagadeesh| Last Modified ಮಂಗಳವಾರ, 29 ಜನವರಿ 2019 (17:46 IST)
ಲಿಂಗೈಕ್ಯರಾದ ಸಿದ್ದಗಂಗಾ ಶ್ರೀಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ, ಅವರಿಗೆ ಭಾರತ ರತ್ನ ನೀಡಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ
ಅಲ್ಪಸಂಖ್ಯಾತರಿಗೆ ಅನ್ಯಾಯಮಾಡುತ್ತಿದ್ದು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಹಿಂದೇಟು ಹಾಕಿದೆ. ಶಿವಕುಮಾರಸ್ವಾಮೀಜಿಗಳು ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲ ಸಮುದಾಯಗಳಿಗೂ ನಡೆದಾಡುವ ದೇವರಾಗಿದ್ದರು. ಬಾರಿ ಶ್ರೀಗಳಿಗೆ ಭಾರತ ರತ್ನ ಸಿಗಲಿದೆ ಎಂದು ಆಶಿಸಿದ್ದ ಎಲ್ಲ ಸಮುದಾಯಗಳಿಗೆ ನಿರಾಸೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಸಿದ್ದಗಂಗಾ ಶ್ರೀಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರ, ಭಾರತ ರತ್ನ ನೀಡುವಲ್ಲಿ ಪ್ರಾದೇಶಿಕ, ಜಾತಿ ತಾರತಮ್ಯವೆಸಗಿದೆ. ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಇಲ್ಲಿಯವರೆಗೆ ಭಾರತ ರತ್ನ ನೀಡಲಾಗಿದ್ದು, ಇವುಗಳಲ್ಲಿ ಬಹುತೇಕ ಬಿಜೆಪಿಗೆ ಸೇರಿದ ಮತ್ತು ಆರ್.ಎಸ್.ಎಸ್. ಬೆಂಬಲಿತ ವ್ಯಕ್ತಿಗಳೇ ಆಗಿದ್ದಾರೆ. ಪ್ರಶಸ್ತಿ ಪಡೆದವರಲ್ಲಿ ಐವರು ಬ್ರಾಹ್ಮಣರು ಮತ್ತು ಒಬ್ಬರು ಕಾಯಸ್ಥ ಸಮುದಾಯದವರಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ,
ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರದ ಮೂಲಕ ನಿಯಂತ್ರಣ ಮಾಡುತ್ತಿದೆ ಎಂದು ಅವರು ತಿಳಿಸಿದರು.


ಇದರಲ್ಲಿ ಇನ್ನಷ್ಟು ಓದಿ :