ಬಡವರಿಗೆ ಹಾಲು ವಿತರಣೆಯಲ್ಲಿ ವಂಚನೆ; ಪ್ರಶ್ನಿಸಿದ ಮಹಿಳೆ ಮೇಲೆ ಎಫ್ ಐಆರ್ ದಾಖಲು

ಬೆಂಗಳೂರು| pavithra| Last Updated: ಸೋಮವಾರ, 20 ಏಪ್ರಿಲ್ 2020 (14:56 IST)

ಬೆಂಗಳೂರು : ಬಡವರಿಗೆ ಹಾಲು ವಿತರಣೆ ಮಾಡಿದ್ದನ್ನು ಪ್ರಶ್ನಿಸಿದ ಹಿನ್ನಲೆ ವಿಡಿಯೋ ಮಾಡಿದ ಯುವಕನ ಮೇಲೆ ಹಲ್ಲೆ  ಮಾಡಿದ್ದು, ಹಲ್ಲೆ ಪ್ರಶ್ನಿಸಿದ  ಮಹಿಳೆಯ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದೆ.  

ಬೆಂಗಳೂರಿನ ಬೊಮ್ಮನಹಳ್ಳಿಯ ವಿರಾಟನಗರದಲ್ಲಿ ಈ ಘಟನೆ ನಡೆದಿದ್ದು,  ಶಾಸಕ ಸತೀಶ್ ರೆಡ್ಡಿ ಪಿಎ ಸಂಬಂಧಿಕರಿಂದ ಹಾಲು ವಿತರಣೆ ಮಾಡಲಾಗುತ್ತಿತ್ತು. ಆದರೆ  ಅವರು ತಮಗೆ ಬೇಕಾದವರಿಗೆ ಮಾತ್ರ ಹಾಲು ವಿತರಣೆ ಮಾಡಿದ ಹಿನ್ನಲೆ ಇದನ್ನು ವಿರಾಟನಗರದ ಮಹಿಳೆ ಸುಜಾತ ಪ್ರಶ್ನೆ ಮಾಡಿದ್ದರು. ಸುಜಾತರ ಮಗ ಹರೀಶ್ ವಿಡಿಯೋ ಮಾಡಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದರು. > >  

ಈ ಬಗ್ಗೆ ಸುಜಾತ ಉಪಮೇಯರ್ ಗಮನಕ್ಕೆ ತಂದಿದ್ದರೂ ಕೂಡ  ಹಲ್ಲೆ ಪ್ರಶ್ನಿಸಿದ ಸುಜಾತ ವಿರುದ್ಧ ಇದೀಗ  ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.

 ಇದರಲ್ಲಿ ಇನ್ನಷ್ಟು ಓದಿ :