ಹುಡುಗಿಯರು ಎಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇದೀಗ
ಹಣವಾಳ ಗ್ರಾಮದ ಅನಿತಾ, ಹಾಗೂ ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯ ಕಣ್ಣಿಗೆ ಕುತ್ತು ತಂದುಕೊಂಡ ಹುಡುಗಿಯರು. ಎರಡು ಪ್ರತ್ಯೀಕ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಅನಿತಾ ಹಾಗೂ ಚಾತುರ್ಯನ ಅಮ್ಮಂದಿರು ನಮ್ಮ ಮಕ್ಕಳ ಕೂದಲು ಕಪ್ಪಾಗಿ ಆಗುತ್ತವೆ ಅಲ್ಲದೇ ತಲೆಯಲ್ಲಿ ಹೇನಿನ ಸಮಸ್ಯೆ ಇರಲ್ಲ ಎಂದು ಸೀತಾಫಲ ಹಣ್ಣಿನ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಅದನ್ನು ಪೇಸ್ಟ್ ಮಾಡಿ ರಾತ್ರಿ ತಲೆಗೆ ಹಚ್ಚಿದ್ದಾರೆ. ಆದರೆ ಆ ಬೀಜದ ವಿಷಭರಿತ ರಾಸಾಯನಿಕವು ಕಣ್ಣಿನ ಒಳಗೆ ಹೋಗಿ ಕಣ್ಣುಗಳು ಮಂಜು ಮಂಜಾಗಿ ಕಂಡಿವೆ.
ಇದರಿಂದ ಆತಂಕಗೊಂಡ ಪೋಷಕರು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಿದ ವೈದ್ಯರು ಕಣ್ಣಿನ ದೋಷದಿಂದ ಇಬ್ಬರನ್ನು ಪಾರು ಮಾಡಿದ್ದಾರೆ.