ಗೆಳೆಯನ ಜೊತೆ ಕುಳಿತು ಮಾತನಾಡುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ, ಮಂಗಳವಾರ, 6 ನವೆಂಬರ್ 2018 (08:49 IST)

ಮುಂಬೈ : 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಆಕೆಯ ಗೆಳೆಯ ಜೊತೆ ಕುಳಿತು ಮಾತನಾಡುತ್ತಿರುವ ವೇಳೆ ಕಾಮುಕರು ಆಕೆಯನ್ನು ಎಳೆದೊಯ್ಯಯ್ದು ಸಾಮೂಹಿಕ ಎಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.


ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಇಬ್ಬರು ಒಂದೇ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಮಾಡುತ್ತಿದ್ದು ನವೆಂಬರ್ 2ರಂದು ರಾತ್ರಿ ಹೈದರಾಬಾದ್-ಜಬಲ್ಪುರ್ ಹೆದ್ದಾರಿಯಲ್ಲಿ ಹಡ್ಕೇಶ್ವರದಲ್ಲಿ ಪೊದೆಗಳ ಹಿಂದೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಇಬ್ಬರು ವ್ಯಕ್ತಿಗಳಲ್ಲೊಬ್ಬ ಹುಡುಗನ ಮೇಲೆ ಹಲ್ಲೆ ಮಾಡಿದರೆ, ಇನ್ನೊಬ್ಬ ಸಂತ್ರಸ್ತೆಯನ್ನ ಪೊದೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.


ಈ ಘಟನೆಯ ನಂತರ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಇಬ್ಬರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಐಪಿಸಿ ಸೆಕ್ಷನ್ ಅಡಿ ಗ್ಯಾಂಗ್‍ರೇಪ್  ಎಂದು ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಗಂಟೆಗಳೊಳಗೆ ಅನಿಲ್ ಥೆಟೆ (46) ಮತ್ತು ಬಾಬಾ ಭಗತ್ (38) ಇಬ್ಬರನ್ನ ಆರೋಪಿಗಳೆಂದು ಶಂಕಿಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎರಡನೇ ಮದುವೆಯಾಗಲು ನಿರಾಕರಿಸಿದ ವಿವಾಹಿತನಿಗೆ ಯುವತಿಯ ಮಾವಂದಿರು ಮಾಡಿದ್ದೇನು

ಮೈಸೂರು : ಯುವತಿಯೊಬ್ಬಳ ಜೊತೆ ಎರಡನೇ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿವಾಹಿತನೊಬ್ಬನನ್ನು ಯುವತಿಯ ...

news

ಮತ ಎಣಿಕೆಗೆ ಸಕಲ ಸಿದ್ಥತೆ ಕೈಗೊಂಡ ಜಿಲ್ಲಾಡಳಿತ

ಜಮಖಂಡಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ನ.12ರಂದು ಹೊರ ಬೀಳಲಿದ್ದು, ಬಾಗಲಕೋಟೆ ಜಿಲ್ಲಾಡಳಿತ ...

news

ಮಾರಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದ ಸಚಿವ

ರಾಜ್ಯದಲ್ಲಿ ಹೆಚ್ – 1 ಎನ್ – 1 ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ...

news

ತಂದೆ-ಅಜ್ಜಿಯನ್ನೇ ಕೊಲೆ ಮಾಡಿ ಕಥೆ ಹೆಣೆದ ಭೂಪ ಅಂದರ್

ತನ್ನ ತಂದೆ ಹಾಗೂ ಅಜ್ಜಿಯನ್ನೇ ಕೊಲೆ ಮಾಡಿ ಆ ಬಳಿಕ ತಮ್ಮ ಮನೆಗೆ ಐವರು ದರೋಡೆಕೋರರು ತನ್ನ ತಂದೆಯನ್ನು ಕೊಲೆ ...