ಹಾವೇರಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ

ಹಾವೇರಿ| Jagadeesh| Last Modified ಗುರುವಾರ, 13 ಸೆಪ್ಟಂಬರ್ 2018 (18:51 IST)

ಹಾವೇರಿಯಲ್ಲಿ ಗೌರಿ ಗಣೇಶ ನ ಹಬ್ಬದ ಮನೆ ಮಾಡಿದೆ. ಬಣ್ಣ ಬಣ್ಣದ ಹೂವಿನ ಮಾಲೆಗಳಿಂದ ಅಲಂಕಾರಗೊಂಡ ಗಣಪತಿಯ ಮೂರ್ತಿಗಳನ್ನ ಹೊತ್ತು ಮೆರವಣಿಗೆಯ ಮೂಲಕ ಮನೆಯಲ್ಲಿ ಪ್ರತಿಷ್ಟಾಪನೆ ಮಾಡಿ ಭಕ್ಷ ಭೋಜನದ ಆಹಾರ ತಯಾರಿಸಿ ವಿಘ್ನ ನಿವಾರಕನಿಗೆ ನೈವೇದ್ಯ ಅರ್ಪಿಸಲಾಯಿತು.

ಪಿಓಪಿ ಗಣಪತಿಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಮಣ್ಣಿನ ಗಣಪತಿಗಳಿಗೆ ಹೆಚ್ಚಿನ ಬೇಡಿಕೆ ಮಾರುಕಟ್ಟೆಯಲ್ಲಿ ಕಂಡು ಬಂದಿದೆ. ಗಣಪತಿಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಆದರೂ ಹಬ್ಬದ ಸಡಗರದಲ್ಲಿ ಬೆಲೆ ಲೆಕ್ಕಿಸದೇ ಗ್ರಾಹಕರು ಗಣೇಶ ಮೂರ್ತಿ ಕೊಂಡು ತಂದು ಪೂಜೆ ಮಾಡಿದರು.ಇದರಲ್ಲಿ ಇನ್ನಷ್ಟು ಓದಿ :