ರೈತರ ಸಾಲಮನ್ನಾ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ

ಬೆಂಗಳೂರು, ಬುಧವಾರ, 12 ಜೂನ್ 2019 (11:37 IST)

ಬೆಂಗಳೂರು : ರೈತರು ವಾಣಿಜ್ಯ ಬ್ಯಾಂಕ್ ಗಳಿಂದ ಪಡೆದಿರುವ ಬೆಳೆ ಸಾಲಮನ್ನಾ ಯೋಜನೆಯ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಆ ಮೂಲಕ  ಒಂದೇ ಕಂತಿನಲ್ಲಿ ಬಿಡುಗಡೆಗೆ ಸರ್ಕಾರ ಆದೇಶಿಸಿದೆ.
ರೈತರು ವಾಣಿಜ್ಯ ಬ್ಯಾಂಕ್ ಗಳಿಂದ ಪಡೆದಿರುವ ಬೆಳೆಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಅರ್ಹತೆ ಹೊಂದಿರುವ ರಿಸ್ಟ್ರಕ್ಚರ್ಡ್ ಸಾಲಗಳು, ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲಗಳು ಹಾಗೂ ಪ್ರೋತ್ಸಾಹ ಧನಕ್ಕೆ ಅರ್ಹತೆ ಹೊಂದಿರುವ ಸಾಲಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾದ ಮೊತ್ತವನ್ನು ಕಡಿತಗೊಳಿಸಿ, ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.


ಹಾಗೇ ಎನ್.ಪಿ.ಎ. ಸಾಲಗಳು ಮತ್ತು ದಿನಾಂಕ 1-1-2018 ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಿಂದಾಲ್ ಗೆ ಭೂಮಿ ನೀಡಿಕೆಯ ವಿಚಾರ; ಮರು ಪರಿಶೀಲನೆ ನಡೆಸಲು ಸಿಎಂ ನಿರ್ಧಾರ

ಬೆಂಗಳೂರು : ರಾಜ್ಯ ಸರ್ಕಾರ ಜಿಂದಾಲ್ ಗೆ ನೀಡಿರುವ ಜಮೀನಿನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ...

news

ಗುಜರಾತ್ ಗೆ ಇಂದು ‘ವಾಯು’ ದಾಳಿ: ಶಾಲಾ ಕಾಲೇಜುಗಳಿಗೆ ರಜೆ

ನವದೆಹಲಿ: ಗುಜರಾತ್ ಕರಾವಳಿಗೆ ಇಂದು ವಾಯು ಚಂಡಮಾರುತ ಅಪ್ಪಳಿಸಲಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಶಾಲೆ ...

news

ನರೇಂದ್ರ ಮೋದಿಜೀ ಥ್ಯಾಂಕ್ಸ್ ಎಂದ ಸುಮಲತಾ ಅಂಬರೀಶ್

ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ...

news

ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ಖ್ಯಾತ ಹಾಲಿವುಡ್ ನಟ. ಕಾರಣವೇನು ಗೊತ್ತಾ?

ಬಾಲಿ : ಭಾರತೀಯರು ವಿದೇಶಗಳತ್ತ ಮನಸೋಲುತ್ತಿರುವಾಗ ಹಾಲಿವುಡ್ ನಟನೊಬ್ಬ ಭಾರತದ ಮೇಲಿನ ಪ್ರೀತಿಗೆ ತಮ್ಮ ...