Widgets Magazine

ಬಜೆಟ್ ಮಂಡನೆಗೆ ಸರಕಾರ ರೆಡಿ : ಟಿವಿ ಕ್ಯಾಮೆರಾಗಳಿಗೆ ನೋ ಎಂಟ್ರಿ

ಬೆಂಗಳೂರು| Jagadeesh| Last Modified ಶುಕ್ರವಾರ, 14 ಫೆಬ್ರವರಿ 2020 (19:07 IST)
ರಾಜ್ಯ ಸರಕಾರ ಮಾರ್ಚ್ 5 ರಂದು ಬಜೆಟ್ ಮಂಡನೆಗೆ ಮುಂದಾಗಿದೆ. ಈ ಬಾರಿಯೂ ಅಧಿವೇಶನಕ್ಕೆ ಟಿವಿ ವಾಹಿನಿಗಳ ಕ್ಯಾಮೆರಾಗಳಿಗೆ ವಿಧಾನಸಭೆ ಒಳಗಡೆ ನಿಷೇಧಿಸಲಾಗಿದೆ.

ಮಾಧ್ಯಮಗಳ ಕ್ಯಾಮೆರಾಗಳಿಗೆ ಅವಕಾಶವಿಲ್ಲ ಅಂತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಲೋಕಸಭೆ ಹಾಗೂ ರಾಜ್ಯಸಭೆ ಮಾದರಿ ವ್ಯವಸ್ಥೆಯನ್ನು ವಿಧಾನಸಭೆಯಲ್ಲಿಯೂ ಪಾಲನೆ ಮಾಡಲಾಗುತ್ತಿದೆ.
ಸಭೆಯ ಸದಸ್ಯರು ಅಧಿವೇಶನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಅಂತ ಕಾಗೇರಿ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :