ಆಸ್ಪತ್ರೆಯ ಬಾಗಿಲಲ್ಲಿಯೇ ಗರ್ಭಿಣಿಯ ನರಳಾಟ

ಬಾಗಲಕೋಟೆ, ಮಂಗಳವಾರ, 5 ಡಿಸೆಂಬರ್ 2017 (17:44 IST)

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆಗಳಿರುವುದೇ ಜನಸಾಮಾನ್ಯರ ಸೇವೆಗಾಗಿ. ಆದರೆ ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ  ಬಡವರಿಗೆ ಯಾವುದೇ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಹಾಗೇ ಕೆಲವು ಆಸ್ಪತ್ರೆಗಳಲ್ಲಿ  ಇಂದಿಗೂ ಸೌಲಭ್ಯಗಳ ಕೊರತೆ ಇದೆ.ಇದಕ್ಕೆ ನಿದರ್ಶನವೆಂಬಂತೆ ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಘಟನೆಯೊಂದು ಸಂಭವಿಸಿದೆ. ಇಂದು ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರು  ಆಸ್ಪತ್ರೆಯ ಬಾಗಿಲಲ್ಲೆ ನರಳಾಡಿದರು. ಅವರನ್ನು ಆಸ್ಪತ್ರೆಯ  ಒಳಗೆ ದಾಖಲಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಆಸ್ಪತ್ರೆಯಲ್ಲಿದ್ದ ವೈದ್ಯರ ಕೊರತೆ.


ಜಿಲ್ಲಾಸ್ಪತ್ರೆಯಲ್ಲಿ ಇದ್ದದ್ದೇ ಒಬ್ಬರೇ ಒಬ್ಬರು ಅನಸ್ತೇಶಿಯಾ ವೈದ್ಯರು. ಅವರು ಕೂಡ ದು ಆಸ್ಪತ್ರೆಗೆ ಬಂದಿರಲಿಲ್ಲವಾದ್ದರಿಂದ ಆಸ್ಪತ್ರೆಗೆ ಬಂದ ಗರ್ಭಿಣಿ ಬಾಗಿಲಲ್ಲೆ ನರಳುವ ಸನ್ನಿವೇಶ ಉಂಟಾಗಿದೆ. ನಂತರ ಅವರನ್ನು ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂಡಿವುಡ್ ಮೀಡಿಯಾ ಎಕ್ಸ್‌ಲೆನ್ಸ್ ಅವಾರ್ಡ್ 2017: ಖ್ಯಾತ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಡಿಸೆಂಬರ್ 1 ರಂದು ನಡೆದ ಪ್ರತಿಷ್ಠಿತ ಇಂಡಿವಿಡ್ ಮೀಡಿಯಾ ...

news

ಚಾಕೋಲೇಟ್ ಬೇಡ, ಚಿಲ್ಲರೆ ಕೊಡಿ (ವೀಡಿಯೋ ನೋಡಿ)

ಉಡುಪಿ: ಈಗ ಎಲ್ಲೆ ನೋಡಿದರೂ ಚಿಲ್ಲರೆಯ ಸಮಸ್ಯೆ. ಹೋಟೆಲ್ , ಬಸ್ ಹೀಗೆ ಎಲ್ಲೆಂದರಲ್ಲಿ ಚಿಲ್ಲರೆ ...

news

ಗರ್ಭಿಣಿಯ ಮೇಲೆ ಕಾಮುಕರ ಅಟ್ಟಹಾಸ

ಹೈದರಾಬಾದ್: ಏಳು ತಿಂಗಳ ಗರ್ಭಿಣಿಯೊಬ್ಬರು ಚಾಲಕ ಹಾಗೂ ಸಹಾಯಕನ ಕಾಮುಕ ವರ್ತನೆಯಿಂದ ಪಾರಾಗಲು ...

news

ಆರಕ್ಷಕರ ಮೇಲೆ ಕುಡುಕರ ರಾಕ್ಷಸ ವರ್ತನೆ

ಬೆಂಗಳೂರು: ಮಹಿಳೆಯರ ಜತೆ ಯಾವುದೇ ವ್ಯಕ್ತಿ ಅಸಭ್ಯ ವಾಗಿ ವರ್ತಿಸಿದಾಗ ಪೊಲೀಸರು ಬಂದು ರಕ್ಷಣೆ ...