Widgets Magazine

ಸಚಿವ ಆರ್.ಅಶೋಕ್ ಗೆ ಗುಂಡೂರಾವ್ ಟಾಂಗ್

ಕಲಬುರಗಿ| Jagadeesh| Last Modified ಶನಿವಾರ, 17 ಅಕ್ಟೋಬರ್ 2020 (17:27 IST)
ರಾಜ್ಯದ ಒಂದೆಡೆ ಪ್ರವಾಹ ಪರಿಸ್ಥಿತಿ ಅಪಾರ ಹಾನಿಗೆ ಕಾರಣವಾಗುತ್ತಿದ್ದರೆ, ಮತ್ತೊಂದೆಡೆ ಬೈ ಎಲೆಕ್ಷನ್ ಕಾವು ಜೋರಾಗುತ್ತಿದೆ.

ಈ ನಡುವೆ ಸಚಿವ ಆರ್.ಅಶೋಕ್ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ವಕ್ತಾರ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.  

ಈ ಮೊದಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರವು ಕೇಳಿದ್ದ ಪರಿಹಾರದ ಹಣ ಬಂದಿದೆಯಾ? ಎಂದು ಪ್ರಶ್ನಿಸಿದ್ದಾರೆ.
 

ನೀವು ಕೇಳಿದ ಪರಿಹಾರ ಪ್ರವಾಹ ಸಂತ್ರಸ್ತರಿಗೆ ಸಿಕ್ಕಿದೆಯಾ? ಒಂದು ತಿಂಗಳ ಬಳಿಕ ರಾಜ್ಯದ ಜನ ಮತ್ತೆ ಪ್ರವಾಹಕ್ಕೆ ಸಿಲುಕಿಕೊಂಡಿದ್ದಾರೆ. ಈಗ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿ ದಿಕ್ಕು ತಪ್ಪಿಸುವ ಯೋಜನೆ ಏನಾದ್ರು ಇದೆಯೇ ಎಂದು ಟ್ವಿಟ್ ಮಾಡಿ ತಿವಿದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :