Widgets Magazine

ಕಾಟಾಚಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ?

ತುಮಕೂರು| Jagadeesh| Last Modified ಗುರುವಾರ, 10 ಜನವರಿ 2019 (16:15 IST)
ಕಾಟಾಚಾರಕ್ಕೆ ಸಚಿವರೊಬ್ಬರು ಆಸ್ಪತ್ರೆಗೆ ಭೇಟಿ ನೀಡಿರುವ ಆರೋಪ ಕೇಳಿಬಂದಿದೆ.
ನೆಲದ ಮೇಲೆ ಮಲಗಿದ್ದ ರೋಗಗ್ರಸ್ತ ಬಾಲಕಿಯನ್ನ ಕಂಡರೂ ಕಾಣದಂತೆ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೆಮ್ಮು ಜ್ವರದಿಂದ ಬಳಲುತ್ತಿದ್ದ ಬಾಲಕಿ ಲಿಖಿತ. ತುಮಕೂರು ಗ್ರಾಮಾಂತರ ಗೂಳರಿವೆ ಗ್ರಾಮದ ನಿವಾಸಿ.

ಲಿಖಿತಾ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತುಮಕೂರಿನಲ್ಲಿ ಸಚಿವರ ಆಗಮನ ಹಿನ್ನೆಲೆ ವಾರ್ಡ್ ನಿಂದ ಹೊರಗೆ ಕಳುಹಿಸಿದ್ದರು. ಜ್ವರ ಕೆಮ್ಮಿನಿಂದ ಬಳಲುತ್ತಿದ್ರಿಂದ ಟವೆಲ್ ಹಾಸಿ ಮಲಗಿಸಿದ್ದರು.

ಮಿನಿಸ್ಟು ಬಂದ್ರಿಂದ ಮಗುವನ್ನ ಎತ್ತಿಕೊಂಡೆ. ಸಚಿವರು ಮಾತಾಡಿಸಿದ್ರು ಎಂದ
ಬಾಲಕಿ ಅಜ್ಜಿ ಪುಟ್ಟಲಕ್ಷ್ಮಿ ಹೇಳಿಕೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :