ದ.ಕನ್ನಡ, ಕೇರಳ ಗಡಿಭಾಗಗಳಲ್ಲಿ ಇಂದು ಭಾರೀ ಮಳೆ

ಮಂಗಳೂರು| Krishnaveni K| Last Modified ಶನಿವಾರ, 15 ಮೇ 2021 (10:31 IST)
ಮಂಗಳೂರು: ಕೇರಳ ಗಡಿಭಾಗ, ಮಂಗಳೂರು ಸೇರಿದಂತೆ ದ.ಕನ್ನಡ ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗುತ್ತಿದೆ.  
> ಬೆಳಗ್ಗಿನಿಂದಲೇ ಈ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೇರಳದ ಕೆಲವು ಭಾಗಗಳಲ್ಲಿ ಈಗಾಗಲೇ ಆರೆಂಜ್, ರೆಡ್ ಅಲರ್ಟ್ ಘೋಷಿಸಲಾಗಿದೆ.>   ಚಂಡಮಾರುತದ ಬೆನ್ನಲ್ಲೇ ಅವಧಿಗೆ ಮುನ್ನವೇ ಮುಂಗಾರು ಮಳೆ ಪ್ರವೇಶಿಸಲಿದೆ ಎಂಬ ಇಲಾಖೆಯ ಸೂಚನೆಯ ಬೆನ್ನಲ್ಲೇ ಭಾರೀ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಜೊತೆಗೆ ನೈಋತ್ಯ ಮಾರುತ ಪ್ರಬಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮಳೆ ಜೋರಾಗಿದೆ.ಇದರಲ್ಲಿ ಇನ್ನಷ್ಟು ಓದಿ :