Widgets Magazine

ಕರ್ನಾಟಕ ಬಂದ್ ಗೆ ಯಾರ ಬೆಂಬಲವಿದೆ, ಯಾರ ಬೆಂಬವಿಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು| pavithra| Last Modified ಬುಧವಾರ, 12 ಫೆಬ್ರವರಿ 2020 (11:26 IST)
ಬೆಂಗಳೂರು : ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ನಾಳೆ ಕರ್ನಾಟಕದಾದ್ಯಂತ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಇದಕ್ಕೆ ರಕ್ಷಣಾ ವೇದಿಕೆ ಸೂಚಿಸಲ್ಲ ಎಂಬುದಾಗಿ ತಿಳಿದುಬಂದಿದೆ.


ನಾಳೆ ಕರ್ನಾಟಕ ಬಂದ್ ಕರೆಗೆ ಚಾಲಕರ ಸಂಘ, ಉಬರ್, ಓಲಾ ಮಾಲೀಕರ ಸಂಘ, ಹೋಟೇಲ್ ಮಾಲೀಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ  ಸೇರಿದಂತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದ್ದಾರೆ. ಆದರೆ ವಾಹನಗಳ ಸಂಚಾರವಿದ್ದು, ಹೋಟೆಲ್ ಗಳು ಹಾಗೂ ಶಾಲಾ ಕಾಲೇಜುಗಳು  ತೆರೆದಿರುವುದಾಗಿ ತಿಳಿಸಿದೆ.


ಆದರೆ ನಾಳಿನ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಸೇನೆ ಸಂಘಟನೆಗಳು ಬೆಂಬಲ ನೀಡುತ್ತಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ. ಹಾಗೇ  ಚಲನಚಿತ್ರ ಮಂಡಳಿ ಕೂಡ ಬೆಂಬಲ ನೀಡುತ್ತಿಲ್ಲ ಎಂಬುದಾಗಿ ತಿಳಿಸಿದೆ.

ಇದರಲ್ಲಿ ಇನ್ನಷ್ಟು ಓದಿ :