ಬಿಜೆಪಿ ಶಾಸಕರ ಬೆಂಬಲಿಗರಿಂದ ಮನೆ ಧ್ವಂಸ?

ಚಿಕ್ಕಮಗಳೂರು, ಬುಧವಾರ, 13 ಫೆಬ್ರವರಿ 2019 (12:28 IST)

ಬಿಜೆಪಿ ಶಾಸಕರ ಬೆಂಬಲಿಗರೊಬ್ಬರು ಮನೆಯೊಂದನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಶಾಸಕರ ವಿರುದ್ಧವೂ ಆ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

ಮೂಡಿಗೆರೆ ಶಾಸಕರವಿರುದ್ಧ ದೌರ್ಜನ್ಯ  ಆರೋಪ ಕೇಳಿಬಂದಿದೆ. ಬಿಜೆಪಿ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಲ್ಮನೆ ಗ್ರಾಮದ ಲೋಕೇಶ್ ಕುಟುಂಬಸ್ಥರು ಶಾಸಕರ ಹಾಗೂ ಶಾಸಕರ ಬೆಂಬಲಿಗರ ವಿರುದ್ಧ ಆರೋಪ ಮಾಡಿದ್ದಾರೆ.

ಲೋಕೇಶ್ ಗೆ ಸಂಬಂಧಿಸಿದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಲಕ್ಷಾಂತರ ರೂಪಾಯಿ‌ ಬೆಲೆಬಾಳುವ ಕಾಫಿ ಕೊಯ್ದುಕೊಂಡು ಹೋಗಲಾಗಿದೆ. ಕಲ್ಮನೆ ಗ್ರಾಮದ ಲೋಕೇಶ್ ಗೆ ಸೇರಿರುವ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಅಲ್ಲದೇ ಶಾಸಕರ ಬೆಂಬಲಿಗರಿಂದ ಮನೆ ದ್ವಂಸವಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಶಾಸಕರ ಬೆಂಬಲಿಗರಿಂದ ಲೋಕೇಶ್ ಕುಟುಂಬದವರಿಗೆ  ಕೊಲೆ ಬೆದರಿಕೆ ಹಾಕಲಾಗುತ್ತಿದೆಯಂತೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನವಾಗಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಹೀಗಾಗಿ ಬಾಳೂರು ಪೊಲೀಸ್ ಠಾಣೆ ಮುಂದೆ ಧರಣಿ ಕೂಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತ ಸ್ವಾಮೀಜಿ ಯಾರು?

ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತಿದ್ದಾರೆ.

news

ಬಂಡಾಯಗಾರರೊಂದಿಗೆ ನಾನಿಲ್ಲ ಎಂದ ಉಮೇಶ್ ಜಾಧವ

ಕಾಂಗ್ರೆಸ್ ನ ಬಂಡಾಯಗಾರರೊಂದಿಗೆ ನಾನು ಇಲ್ಲ. ಅಲ್ಲದೇ ನಾನು ಮುಂಬೈಗೂ ಹೋಗಿಲ್ಲ. ಹೀಗಂತ ಕೈ ಪಾಳೆಯದ ಶಾಸಕ ...

news

ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ಪರಿಸ್ಥಿತಿಗೆ ಹೋಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡ್ರಾ ಸ್ಪೀಕರ್?

ಬೆಂಗಳೂರು : ನಿನ್ನೆ ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ...

news

ಕುಮಾರಸ್ವಾಮಿ ಹಾಗೂ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ

ಬೆಂಗಳೂರು : ಅಪರೇಷನ್ ಕಮಲದ ಆಡಿಯೋದ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಹಾಸನದ ಬಿಜೆಪಿ ಶಾಸಕ ...