Widgets Magazine

ಕೊರೊನಾಗೆ ಒಂದೇ ದಿನ ನೂರಾರು ಜನರ ಸಾವು : ಹೆಣ ಸಾಗಿಸೋದಕ್ಕೆ ಯಾರೂ ಬರುತ್ತಿಲ್ಲ

ರೋಮ್| Jagadeesh| Last Modified ಗುರುವಾರ, 19 ಮಾರ್ಚ್ 2020 (15:37 IST)

ಮಹಾಮಾರಿ ಕೊರೊನಾಗೆ ಒಂದೇ ದಿನದಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, ಶವಗಳನ್ನು ಕೊಂಡೊಯ್ಯಲೂ ಜನರು ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

 

ಇಟಲಿಯಲ್ಲಿ ಕೊರೊನಾಗೆ ಈವರೆಗೆ ಅಂದಾಜು 3 ಸಾವಿರದಷ್ಟು ಜನರು ಸಾವನ್ನಪ್ಪಿದ್ದಾರೆ. ಒಂದೇ ದಿನದಲ್ಲಿ 450ಕ್ಕೂ ಹೆಚ್ಚು ಜನರು ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ.

ಕೊರೊನಾ ಶಂಕಿತರೇ ಜಾಸ್ತಿಯಾಗಿದ್ದು, ಆಸ್ಪತ್ರೆಗಳೆಲ್ಲ ಫುಲ್ ಆಗಿವೆ. ಕೊರೊನಾ ವೈರಸ್ ನಿಂದ ವ್ಯಕ್ತಿಗಳು ಸಾಯುತ್ತಿದ್ದರೆ ಅವರ ಶವ ಕೊಂಡೊಯ್ಯಲು ಯಾರೂ ಬರುತ್ತಿಲ್ಲ. ಸತ್ತವರ ಮನೆಮಂದಿಗೂ ಕೊರೊನಾ ಅಟ್ಯಾಕ್ ಆಗಿದ್ದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಿಲಿಟರಿ ವಾಹನಗಳಲ್ಲಿ ಶವಗಳನ್ನು ಸಾಗಣೆ ಮಾಡಲಾಗುತ್ತಿದೆ.

 

 

ಇದರಲ್ಲಿ ಇನ್ನಷ್ಟು ಓದಿ :