ಪ್ರೀತಿಸಿ ಮದುವೆಯಾದ ಪತ್ನಿಗೆ ಕೊರೊನಾ ಬಂದಾಗ ಗಂಡ ಪರಾರಿ

ಬೆಂಗಳೂರು| Jagadeesh| Last Modified ಭಾನುವಾರ, 9 ಆಗಸ್ಟ್ 2020 (23:06 IST)
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಕೊರೊನಾ ಭಾರೀ ಆಘಾತ ನೀಡಿದೆ.


ಪತ್ನಿಗೆ ಕೊರೊನಾ ದೃಢಪಡುತ್ತಿದ್ದಂತೆ ಎರಡ್ಮೂರು ವರ್ಷ ಆಕೆಯೊಂದಿಗೆ ಸಂಸಾರ ಮಾಡಿದ್ದ ಗಂಡ ತಡರಾತ್ರಿ ಹೇಳದೇ ಕೇಳದೇ ಓಡಿ ಹೋಗಿದ್ದಾನೆ.

ಬೆಂಗಳೂರಿನ ಜೆ.ಸಿ.ನಗರದಲ್ಲಿ ಘಟನೆ ನಡೆದಿದ್ದು, ಕೊರೊನಾದಿಂದಾಗಿ ಪತ್ನಿ ಮೃತಪಟ್ಟಿದ್ದಾಳೆ.

ಆದರೆ ಪ್ರೀತಿ ಮಾಡಿ ಮದುವೆಯಾಗಿದ್ದರೂ ಪತ್ನಿಯ ಅಂತ್ಯಕ್ರಿಯೆಗೂ ಗಂಡ ಬರಲೇ ಇಲ್ಲ.


 
ಇದರಲ್ಲಿ ಇನ್ನಷ್ಟು ಓದಿ :