Widgets Magazine

ನನಗೂ ಸಚಿವ ಸ್ಥಾನ ಬೇಕು ಹೆಚ್.ವಿಶ್ವನಾಥ್ ಹೊಸ ಬಾಂಬ್

ಮೈಸೂರು| jagadeesh| Last Modified ಬುಧವಾರ, 12 ಜೂನ್ 2019 (19:52 IST)
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದು, ತಮಗೂ ಸಚಿವ ಸ್ಥಾನ ಬೇಕೆಂದು ಹೇಳಿದ್ದಾರೆ.

ಮೈತ್ರಿ ಸರಕಾರದ ಸಂಪುಟ ವಿಸ್ತರಣೆಯಲ್ಲಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಹೀಗಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ನೀಡಬೇಕು. ನೀಡಿದರೆ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುತ್ತೇನೆ ಎಂದಿದ್ದಾರೆ.

ಆದರೆ ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು, ಸಚಿವ ಸ್ಥಾನ ನೀಡುವ ಅಧಿಕಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಇದೆ ಎಂದಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಪುನಃ ಪಡೆಯುವುದಿಲ್ಲ ಅಂತ ಹೇಳಿದ ಅವರು, ಪಾರ್ಟಿಯಲ್ಲಿ ಸಮರ್ಥ ನಾಯಕರು ಇದ್ದಾರೆ. ಯುವಜನತೆಗೆ ಅವಕಾಶ ನೀಡಿ ಅಂತ ಪಕ್ಷದ ಮುಖಂಡರಿಗೆ ಹೇಳಿದ್ದೇನೆ ಎಂದರು.
ನನ್ನ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ಧೇನೆ. ಹುಣಸೂರು ಅಭಿವೃದ್ಧಿ ನನ್ನ ಗುರಿ ಹೀಗಂತ ಹೆಚ್. ವಿಶ್ವನಾಥ ಹೇಳಿದ್ದಾರೆ.


 
 
 
 
 
 
ಇದರಲ್ಲಿ ಇನ್ನಷ್ಟು ಓದಿ :