ರಾಜ್ಯದಲ್ಲಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಲ್ಲ, ದೇವೇಗೌಡರ ಕುಟುಂಬದ ಸರ್ಕಾರ- ರೇಣುಕಾಚಾರ್ಯ ಕಿಡಿ

ದಾವಣಗೆರೆ, ಮಂಗಳವಾರ, 16 ಏಪ್ರಿಲ್ 2019 (09:36 IST)

ದಾವಣಗೆರೆ : ಬಿಜೆಪಿಯ ಮಾಜಿ ಸಚಿವ ಅವರು ಕಾಂಗ್ರೆಸ್ ಪಕ್ಷವನ್ನು  ಕ್ಯಾನ್ಸರ್ ಗೆ ಹಾಗು ಜೆಡಿಎಸ್ ಯನ್ನು ಮೋಹಿನಿ ಭಸ್ಮಾಸುರರಿಗೆ ಹೋಲಿಸಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಪುತ್ರನನ್ನು ಗೆಲ್ಲಿಸಿಕೊಳ್ಳಲು ಮಂಡ್ಯದಲ್ಲಿ ಠಿಕಾಣಿ ಹೂಡಿದ್ದಾರೆ. ಅವರು ಮಂಡ್ಯ ಬಿಟ್ಟು ಹೊರಗೆ ಬರಲಿ, ಆಗ ಜನರ ಕಷ್ಟ ಏನಿದೆ ಎನ್ನುವುದು ಗೊತ್ತಾಗುತ್ತದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಆಹಾಕಾರವಿರುವಾಗ  ಸಿಎಂ ಕುಮಾರಸ್ವಾಮಿ ಅವರು ಮಾತ್ರ ಸರ್ಕಾರದ ಹಣವನ್ನು ಮಂಡ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದ ಸರ್ಕಾರವಿದೆ. ಕಾಂಗ್ರೆಸ್ಸಿಗರು ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಜೆಡಿಎಸ್‍ಗೆ ಅಧಿಕಾರ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್‍ಗೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್‍ನ ಕೆಲವು ಮುಖಂಡರು ನನ್ನ ಬಳಿ ಹೇಳಿದ್ದಾರೆ ಎಂದು ಹೊಸ ಬಾಂಬ್ ಸ್ಪೋಟಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದವರ್ಯಾರು ಗೊತ್ತಾ?

ಮಂಡ್ಯ : ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದು ಮಂಡ್ಯ ...

news

ಮುಸ್ಲಿಂ, ಕ್ರಿಶ್ಚಿಯನ್ನರು ದೇಶಭಕ್ತರಲ್ಲವಾದ್ದರಿಂದ ಟಿಕೆಟ್ ಕೊಡಲ್ಲ: ಕೆ.ಎಸ್.ಈಶ್ವರಪ್ಪ

ಬಾಗಲಕೋಟೆ: ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ದೇಶಕ್ಕೆ ನಿಷ್ಠರಾಗಿಲ್ಲವಾದ್ದರಿಂದ ಬಿಜೆಪಿ ಪಕ್ಷದ ...

news

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವಿರೋಧಿ?

ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಿರುವ ಸಂದರ್ಭದಲ್ಲಿ ತಮಗೆ ಸಂಬಂಧವಿಲ್ಲ ವಿಷಯದ ಬಗ್ಗೆ ...

news

ನೆಹರು, ಇಂದಿರಾ ಸೇನೆ ಕಟ್ಟಿದಾಗ ಮೋದಿಗೆ ಪ್ಯಾಂಟ್‌ ಹಾಕೋದು ಗೊತ್ತಿರಲಿಲ್ಲ: ಕಮಲ್ ನಾಥ್

ಖಾಂಡ್ವಾ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಭಾರತೀಯ ಸೇನೆ ಕಟ್ಟುತ್ತಿರುವಾಗ ...