Widgets Magazine

ಕಳೆದ 10 ದಿನಗಳಿಂದ ರಾಜ್ಯದಲ್ಲಿ ಹೆಚ್ಚಾದ ಕೊರೊನಾ ಪ್ರಕರಣ

ಬೆಂಗಳೂರು| pavithra| Last Modified ಶನಿವಾರ, 16 ಮೇ 2020 (10:49 IST)
ಬೆಂಗಳೂರು : ರಾಜ್ಯದಲ್ಲಿ ಕಳೆದ 10 ದಿನಗಳಿಂದಿಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, 10 ದಿನಗಳಲ್ಲಿ ಸುಮಾರು 382 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.


ಮೇ 6ರಂದು 693 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಮೇ15ರ ವೇಳೆಗೆ 1056ಕ್ಕೆ ಏರಿಕೆಯಾಗಿದೆ.  ಮೇ 6ರಂದು 20, ಮೇ 7ರಂದು 12 ಕೊರೊನಾ ದಾಖಲಾಗಿದ್ದರೆ, ಮೇ 8ರಂದು 48, ಮೇ 9ರಂದು 41 ಕೊರೊನಾ ಪ್ರಕರಣ ಕಂಡುಬಂದಿದೆ.


ಹಾಗೇ ಮೇ 10ರಂದು 54, ಮೇ11ಕ್ಕೆ 14 , ಮೇ 12ರಂದು 63, ಮೇ 13ರಂದು 34 , ಮೇ 14ರಂದು 27, ಮೇ 15ರಂದು 69 ಪ್ರಕರಣಗಳು ಪತ್ತೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.

 


ಇದರಲ್ಲಿ ಇನ್ನಷ್ಟು ಓದಿ :