ದರ್ಶನ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಇಂದ್ರಜಿತ್ ಭೇಟಿ

ಬೆಂಗಳೂರು| Krishnaveni K| Last Modified ಶುಕ್ರವಾರ, 16 ಜುಲೈ 2021 (10:43 IST)
ಬೆಂಗಳೂರು: ಮೈಸೂರು ಹೋಟೆಲ್ ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ವೇಳೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಡಿ ಬಾಸ್ ವಿರುದ್ಧ ಕಿಡಿ ಕಾರಿದ್ದರು.  
> ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ದರ್ಶನ್ ಅರಿತುಕೊಳ್ಳಬೇಕು. ಈ ಬಗ್ಗೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿ ಎಂದಿದ್ದರು.>   ಅದರ ಬೆನ್ನಲ್ಲೇ ಇದೀಗ ದರ್ಶನ್ ಮೇಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್-ಕುಮಾರಸ್ವಾಮಿ ಭೇಟಿ ಮಾಡಿರುವ ಫೋಟೋವೊಂದು ವೈರಲ್ ಆಗಿದೆ. ಹೀಗಾಗಿ ದರ್ಶನ್ ವಿರುದ್ಧದ ಆರೋಪದ ಹಿಂದೆ ಕುಮಾರಸ್ವಾಮಿ ಬೆಂಬಲ ಇಂದ್ರಜಿತ್ ಗಿದೆಯೇ ಎಂಬ ಅನುಮಾನ ಮೂಡಿಸಿದೆ. ದರ್ಶನ್ ಕೂಡಾ ಮಾಧ್ಯಮಗಳ ಮುಂದೆ ಮಾತನಾಡುವಾಗ ತಮ್ಮ ವಿರುದ್ಧದ ಈ ಎಲ್ಲಾ ಆರೋಪಗಳ ಹಿಂದೆ ಇಂದ್ರಜಿತ್ ಗೆ ಯಾರೋ ಪ್ರಭಾವಿಗಳದ್ದೇ ಕುಮ್ಮಕ್ಕಿದೆ ಎಂದಿದ್ದರು. ಆದರೆ ಈಗ ಹರಿದಾಡುತ್ತಿರುವ ಫೋಟೋ ಈಗಿನದ್ದೇ ಅಥವಾ ಹಳೆಯ ಫೋಟೋವೇ ಎಂಬುದು ಸ್ಪಷ್ಟವಾಗಿಲ್ಲ.ಇದರಲ್ಲಿ ಇನ್ನಷ್ಟು ಓದಿ :