ವಿಜಯಪುರ : ಜೆಡಿಎಸ್ ತಾನೂ ಹಾಳಾಗುತ್ತೆ, ಕಾಂಗ್ರೆಸ್ಸನ್ನೂ ಹಾಳು ಮಾಡುತ್ತಿದೆ ಎಂದು ಬಿಜೆಪಿ ಮುಖಂಡ, ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ದೇವೇಗೌಡರು ಭಾರಿ ಟ್ರಾಪ್ ಮಾಡಿದ್ದಾರೆ. ದೇವೇಗೌಡರಿಗೆ ದೃತರಾಷ್ಟ್ರ ಮೋಹ ಶುರುವಾಗಿದೆ. ಅವರ ಮಕ್ಕಳು, ಮೊಮ್ಮಕ್ಕಳ ಮೋಹದಲ್ಲಿ ಕಾಂಗ್ರೆಸ್ನಂತಹ ಕೌರವ ಕುಲ ಹಾಳಾಗುತ್ತೆ. ಜೆಡಿಎಸ್ ತಾನೂ ಹಾಳಾಗುತ್ತೆ, ಕಾಂಗ್ರೆಸ್ಸನ್ನೂ ಹಾಳು ಮಾಡುತ್ತಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಸನ್ನ ಮುಗಿಸಲು ಕೆಲ ಕೈ