Widgets Magazine

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಎಸ್ ಎಂ ಕೆ ಭೇಟಿ ಮಾಡಿದ ಡಿಕೆಶಿ – ಭಾರೀ ಕುತೂಹಲ

ಬೆಂಗಳೂರು| Jagadeesh| Last Modified ಬುಧವಾರ, 15 ಜನವರಿ 2020 (15:16 IST)

ಕೆಪಿಸಿಸಿ ನೂತನ ಅಧ್ಯಕ್ಷರಾಗೋ ಹುಮ್ಮಸ್ಸಿನಲ್ಲಿರೋ ಮಾಜಿ ಸಚಿವ ಡಿಕೆಶಿ ಇದೀಗ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕನನ್ನು ಭೇಟಿ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.

 

ಬಿಜೆಪಿ ಮುಖಂಡ ಹಾಗೂ ಹಿರಿಯ ನಾಯಕ ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿರೋ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೊಸ ರಾಜಕೀಯ ಚರ್ಚೆಗೆ ಕಾರಣರಾಗಿದ್ದಾರೆ.

 

ಸಿದ್ದರಾಮಯ್ಯ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತನಾಡುತ್ತಿದ್ದರೆ, ಇತ್ತ ಡಿಕೆಶಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿರೋದು ಕುತೂಹಲ ಮೂಡಿಸಿದೆ.

ಡಿಕೆಶಿ ಅವರ ರಾಜಕೀಯ ಗುರುವಾಗಿದ್ದಾರೆ ಎಸ್.ಎಂ.ಕೆ. ಇವರ ಭೇಟಿ ಹಲವು ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದೆ.

 

 

ಇದರಲ್ಲಿ ಇನ್ನಷ್ಟು ಓದಿ :