ಕೆ.ಆರ್.ಎಸ್ ಭರ್ತಿ: ತಮಿಳುನಾಡಿಗೆ ಹರಿದ ನೀರು

ಮಂಡ್ಯ, ಶನಿವಾರ, 14 ಜುಲೈ 2018 (19:18 IST)


 
ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ  ಮೂಡುವಂತಾಗಿದ್ದು,  ನಾಲ್ಕು ವರ್ಷಗಳ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್ಸಂಪೂರ್ಣ ಭರ್ತಿಯಾಗಿದ್ದುಹೆಚ್ಚುವರಿ ನೀರನ್ನು  ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ 
ಮಂಡ್ಯದ ಅನ್ನದಾತರು ಸಾಲದ ಶೂಲಕ್ಕೆ ಸಿಲುಕಿ  ಆತ್ಮಹತ್ಯೆಯ ಹಾದಿ ಹಿಡಿದಿದ್ರುಆದ್ರೆ ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬಂದಿದ್ದರಿಂದ ಮಂಡ್ಯಜಿಲ್ಲೆಯ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದುಇಂದು ಬೆಳಿಗ್ಗೆ 122.70 ಅಡಿಇದ್ದ ಅಣೆಕಟ್ಟೆ ಮಧ್ಯಾಹ್ನದ ವೇಳೆಗೆ 123.20 ಅಡಿ ನೀರು ತುಂಬಿದ್ದುಸಂಪೂರ್ಣ ಭರ್ತಿಗೆ ಇನ್ನು ಕೇವಲ ಒಂದು ಅಡಿ ಮಾತ್ರ ಇತ್ತು.   ನಿಟ್ಟಿನಲ್ಲಿ ಇಂದು ಅಣೆಕಟ್ಟೆ ಮುಂಭಾಗಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಣೆಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದ್ರುಬಳಿಕ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಿದ್ರು.
ವಾಡಿಕೆಯಂತೆ ಅಣೆಕಟ್ಟೆ ತುಂಬೋದು ಆಗಸ್ಟ್ ನಲ್ಲಿಆದ್ರೆ  ಬಾರಿ ಜುಲೈ ತಿಂಗಳಲ್ಲಿಯೇ ಅಣೆಕಟ್ಟೆ ಸಂಪೂರ್ಣ ತುಂಬಿದೆ.  ನಾಲ್ಕು ವರ್ಷಗಳ ಹಿಂದೆ ಅಣೆಕಟ್ಟೆ ಸಂಪೂರ್ಣಭರ್ತಿಯಾಗಿದ್ದು, 2014ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದು ಬಿಟ್ರೆ ಇದುವರೆಗೂ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿರಲಿಲ್ಲಇದೀಗ ಅಣೆಕಟ್ಟೆ ಭರ್ತಿಯಾಗಿರೋದುರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸ್ವಾಗತ

ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಸೇರುವ ಕಾಲ ಹತ್ತಿರವಾಗಿದೆ. 40 ವರ್ಷಗಳ ಇತಿಹಾಸ ಹೊಂದಿದ್ದ ...

news

ಆಹಾರ ಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯ?

ಅನ್ನ ಭಾಗ್ಯ ಅಕ್ಕಿಗೆ ಖನ್ನ ಹಾಕಿರುವ ಅಧಿಕಾರಿಗಳು, ನಂಜುಂಡೇಶ್ವರನ ಊರಲ್ಲೇ ಭಾರಿ ಗೋಲ್ ಮಾಲ್ ನಡೆದಿರುವ ...

news

ಗೊರೂರಿನಲ್ಲಿ ಸಚಿವ ಹೆಚ್.ಡಿ.ರೇವಣ್ಣ ಏನೆಂದರು?

ಸಚಿವ ಹೆಚ್.ಡಿ.ರೇವಣ್ಣ ಸ್ವ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ರಾಜ್ಯಾದ್ಯಂತ ಮಳೆ ಧಾರಕಾರವಾಗಿ ...

news

ಪೆಟ್ರೊಲ್ ಬೆಲೆ ಏರಿಕೆ ಕುರಿತು ಆ ಶಾಸಕ ಹೇಳಿದ್ದೇನು?

ಪೆಟ್ರೋಲ್ ಬೆಲೆ ಏರಿಕೆಯ ವಿಚಾರದಲ್ಲಿ ಬಿಜೆಪಿ ನಾಯಕರ ವಿರೋಧಕ್ಕೆ ಕಾರ್ಯಕ್ರಮ ಒಂದರಲ್ಲಿ ಮಾಜಿ ಸಚಿವ ...