ಬೆಳಗಾವಿ : ಕೊರೊನಾ ಭೀತಿ ಹಿನ್ನಲೆ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವಿದ್ದರೂ, ನಿಯಮವನ್ನು ಉಲ್ಲಂಘಿಸಿ ಅಲ್ಲಲ್ಲಿ ಜನಜಂಗುಳಿ ಸೇರುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವಿದ್ದರೂ ನಿಯಮ ಉಲ್ಲಂಘಿಸಿ ಬೆಳಗಾವಿಯ ಗೋಕಾಕ್ ಸಂತೆಯಲ್ಲಿ ಜನಸಾಗರ ತುಂಬಿಕೊಂಡಿದೆ. ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದ್ದು, ಪೊಲೀಸರು ಜನರ ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಬೆಂಗಳೂರಿನ ಯಶವಂತಪುರದ ಎಪಿಎಂಸಿಯಲ್ಲಿ ಲಾಕ್ ಡೌನ್ ಆದೇಶವಿದ್ದರೂ ನಿಯಮ ಉಲ್ಲಂಘಿಸಿ ಜನಜಂಗುಳಿ ಸೇರಿದೆ.