ಇಂದು ಸಚಿವ ಡಿ.ಕೆ ಶಿವಕುಮಾರ್ ಐಟಿ ವಿಚಾರಣೆ ; ಇನ್ ಕಂ ಟ್ಯಾಕ್ಸ್ ಕಚೇರಿಗೆ ಬಿಗಿ ಭದ್ರತೆ

ಬೆಂಗಳೂರು| pavithra| Last Modified ಬುಧವಾರ, 3 ಅಕ್ಟೋಬರ್ 2018 (13:47 IST)
ಬೆಂಗಳೂರು : ಇಂದು ಇನ್ ಕಂ ಟ್ಯಾಕ್ಸ್ ಕಚೇರಿಗೆ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ಹೌದು. ಇಂದು ಸಚಿವ ಡಿ.ಕೆ ಶಿವಕುಮಾರ್ ಐಟಿ ವಿಚಾರಣೆ ನಡೆಯಲಿದ್ದು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇನ್ ಕಾಂ ಟ್ಯಾಕ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಇಂದು ಪೊಲೀಸರು
ಇನ್ ಕಂ ಟ್ಯಾಕ್ಸ್ ಕಚೇರಿಗೆ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.


ಬಿಜೆಪಿ ಐಟಿಯನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ವಿರುದ್ಧ ಐಟಿ ಅಸ್ತ್ರದಿಂದ ದಬ್ಬಾಳಿಕೆ ನಡೆಸುತ್ತಿದೆ ಎಂದು ಅರೋಪಿಸಿ ಯೂತ್ ಕಾಂಗ್ರೆಸ್ ನ ಸುಮಾರು ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :