DNA ಟಿಕೆಟ್: ಸಂತೋಷ್ ಜಿಗೆ ಸಚಿವ ಖರ್ಗೆ ಟ್ವೀಟ್ ಟಾಂಗ್

ಕಲಬುರ್ಗಿ, ಭಾನುವಾರ, 28 ಏಪ್ರಿಲ್ 2019 (16:00 IST)


ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಉಮೇಶ್ ಜಾಧವ್ ಪುತ್ರ ಅವಿನಾಶ್ ಗೆ ನೀಡಿದ ಹಿನ್ನೆಲೆಯಲ್ಲಿ ಭಾರೀ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ.  

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ನೀಡಿದ್ದ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ ಕೈ ನಾಯಕರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದು, ಡಿಎನ್ಎ ನೋಡಿ ನಾವು ಟಿಕೆಟ್ ಕೊಡಲ್ಲ ಎಂದಿದ್ದ ಸಂತೋಷ್ ಜಿಗೆ, ಹಾಗಿದ್ದರೆ ಉಮೇಶ್ ಜಾಧವ್ ಪುತ್ರನಿಗೆ ಯಾವ ಹಿನ್ನೆಲೆಯಲ್ಲಿ ಟಿಕೆಟ್ ನೀಡಿದ್ದೀರಿ ಎಂಬ ಪ್ರಶ್ನೆ ಮಾಡಿದ್ದಾರೆ.

ಕಲಬುರ್ಗಿ ಜಿಲ್ಲೆಯ ಬಿಜೆಪಿ ನಾಯಕರ ಕುಟುಂಬ ರಾಜಕಾರಣದ ಪಟ್ಟಿ ನೀಡಿದ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹದ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಅಬ್ಬರಿಸಿದ್ದರು ಬಿಜೆಪಿ ನಾಯಕರು.

ಖರ್ಗೆ ಪುತ್ರ ವ್ಯಾಮೋಹದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾಗಿ ಹೇಳಿದ್ದರು ಉಮೇಶ್ ಜಾಧವ್. ಇದೀಗ ತಮ್ಮ ಪುತ್ರನಿಗೆ ಟಿಕೆಟ್ ದೊರಕಿಸಿಕೊಟ್ಟಿರುವ ಉಮೇಶ್ ಜಾಧವ್ ಕ್ರಮಕ್ಕೆ ಟೀಕೆ ಮಾಡಿದ್ದಾರೆ.  

ಡಿಎನ್ಎ ನೋಡಿ ಟಿಕೆಟ್ ಕೊಡಲ್ಲ ಎಂದಿರುವ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮರಾಠಿ ಭಾಷಿಕರಿಂದ ರಾಜ್ಯದ ಯುವಕನ ಮೇಲೆ ಹಿಗ್ಗಾಮುಗ್ಗಾ ಥಳಿತ

ಟಾಟಾ ಸುಮೋ ಒಂದರಲ್ಲಿ ಬಂದಿದ್ದ ನಾಲ್ಕು ಜನ ವ್ಯಕ್ತಿಗಳು ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿದ ಘಟನೆ ...

news

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ; ರಾಜ್ಯದಲ್ಲಿ ಹೈ ಅಲರ್ಟ್

ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ ಹೈ ಅಲರ್ಟ್ ಘೋಷಣೆ ...

news

ಗೃಹ ಸಚಿವ, ಡಿಕೆಶಿಗೆ ಶೆಟ್ಟರ್ ವಾರ್ನಿಂಗ್?

ರಾಜ್ಯದ ಸಚಿವ ಎಂ.ಬಿ.ಪಾಟೀಲ್, ಡಿ.ಕೆ. ಶಿವಕುಮಾರ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಾಕೀತು ಮಾಡಿದ್ದಾರೆ.

ಬಾಲಕಿ ರೇಪ್ ಕೇಸ್ ಗೆ ಟ್ವಿಸ್ಟ್: ಆರೋಪಿ ಸೆಲ್ಫಿ ಮಾಡಿ ಆತ್ಮಹತ್ಯೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಆರೋಪಿ ಸೆಲ್ಫಿ ...