Widgets Magazine

ಭಾರತಕ್ಕೆ ಓಡಿ ಬಂದ ಸಚಿವ : ಪಾಕಿಸ್ತಾನಕ್ಕೆ ಭಾರೀ ಮುಖಭಂಗ

ನವದೆಹಲಿ| Jagadeesh| Last Modified ಮಂಗಳವಾರ, 10 ಸೆಪ್ಟಂಬರ್ 2019 (17:45 IST)
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ನೆಲೆ, ಬೆಲೆ ಇಲ್ಲ ಅಂತ ಪಾಕ್ ನ ಸಿಖ್ ಸಮುದಾಯದ ಬಲದೇವ್ ಸಿಂಗ್ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದಾರೆ.

ಆಸರೆ ಅರಸಿ ಕುಟುಂಬ ಸಮೇತ ಭಾರತಕ್ಕೆ ಬಂದಿರೋ ಬಲದೇವ್ ಸಿಂಗ್ ರ ಹೇಳಿಕೆಯಿಂದ ಸರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಭಾರೀ ಮುಜುಗರಕ್ಕೆ ಒಳಗಾಗಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಶಾಸಕ ಬ್ಯಾರಿಕೋಟ್ ಜಿಲ್ಲೆಯ ಮೀಸಲು ಕ್ಷೇತ್ರ ಖೈಬರ್ ಫಖ್ತುನ್ ಖ್ವಾ ಕ್ಷೇತ್ರದಿಂದ ಗೆದ್ದಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ಪಾಕಿಸ್ತಾನ ಕೊಡುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಇನ್ನೆಂದೂ ತಾವು ಪಾಕಿಸ್ತಾನಕ್ಕೆ ತೆರಳೋದಿಲ್ಲ ಅಂತ ಬಲದೇವ್ ಸಿಂಗ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :