ನಾನು ದುಡ್ಡು ಪಡೆದುಕೊಂಡಿದ್ದು ನಿಜವೇ ಆಗಿದ್ದಲ್ಲಿ ಜಗತ್ತಿನ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದು ಕೈ ಪಾಳೆಯಕ್ಕೆ ರಾಜೀನಾಮೆ ನೀಡಿರುವ ಶಾಸಕ ಸವಾಲು ಹಾಕಿದ್ದಾರೆ.ಸ್ಪೀಕರ್ ರಮೇಶ್ ಕುಮಾರ್ ಯಾರ ಒತ್ತಡಕ್ಕೂ ಮಣಿಯಲ್ಲ. ನ್ಯಾಯಬದ್ಧವಾಗಿ ಕೆಲಸ ನಿರ್ವಹಿಸಲಿದ್ದಾರೆ. ರಾಜೀನಾಮೆ ಡಿಲೇ ಯಾಕೆ ಆಗ್ತಾ ಇದೆಯೋ ಗೊತ್ತಿಲ್ಲ. ಶೀಘ್ರವೇ ರಾಜೀನಾಮೆ ಅಂಗೀಕಾರವಾಗಲಿದೆ ಅನ್ನೋ ವಿಶ್ವಾಸವಿದೆ. ಹೀಗಂತ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಶಾಸಕ ಉಮೇಶ್ ಜಾಧವ ಹೇಳಿದ್ದಾರೆ.ರಾಜೀನಾಮೆ ಅಂಗೀಕಾರವಾಗದಿದ್ದರೂ ಲೋಕಸಭೆ ಚುನಾವಣೆಗೆ ನಿಲ್ತೇನೆ.