ಸಿಎಂ ಕುಮಾರಸ್ವಾಮಿ ನಾಟಿ ಮಾಡಿರುವುದಕ್ಕೆ ಬಿಜೆಪಿ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ. ಸಿಎಂ ನಾಟಿ ಮಾಡದೇ ಬಿಜೆಪಿಯವರಂತೆ ಸದನದಲ್ಲಿ ಕುಳಿತು ಬ್ಲೂಂ ಫೀಲಂ ನೋಡೋಕಾಗುತ್ತಾ ಎಂದು ಎಂಎಲ್ಸಿಯೊಬ್ಬರು ವ್ಯಂಗ್ಯವಾಡಿದ್ದಾರೆ. ಸಿಎಂ ನಾಟಿ ಮಾಡೋದಕ್ಕೆ ಈಶ್ವರಪ್ಪ ಹಾಗೂ ಬಿಜೆಪಿ ಮುಖಂಡರ ವ್ಯಂಗ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಿಎಂ ಕುಮಾರಸ್ವಾಮಿ ರೈತನ ಮಗ. ರೈತನ ಮಗ ನಾಟಿ ಮಾಡ್ದೆ, ಕ್ಲಬ್ ನಲ್ಲಿ ಡ್ಯಾನ್ಸ್ ಮಾಡೋಕಾಗುತ್ತಾ?