Widgets Magazine

ಮಕ್ಕಳನ್ನು ಕೊಂದು ತಾನೂ ಸಾವಿಗೆ ಶರಣಾದ ತಾಯಿ

ಮಂಡ್ಯ| Krishnaveni K| Last Modified ಮಂಗಳವಾರ, 1 ಡಿಸೆಂಬರ್ 2020 (10:57 IST)
ಮಂಡ್ಯ: ತನ್ನಿಬ್ಬರು ಪುಟಾಣಿ ಮಕ್ಕಳನ್ನು ಕೊಂದು ತಾಯಿಯೊಬ್ಬಳು ತಾನೂ ಜೀವ ಕೊನೆಗಾಣಿಸಿದ ಘಟನೆ ಮಂಡ್ಯ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.
 

26 ವರ್ಷದ ಮಹಿಳೆ ತನ್ನ ಆರು ವರ್ಷದ ಪುತ್ರಿ ಮತ್ತು 4 ವರ್ಷದ ಪುತ್ರನನ್ನು ನೇಣು ಹಾಕಿ ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ. ಪತಿಯ ಜತೆ ಅನ್ಯೋನ್ಯವಾಗಿಯೇ ಇದ್ದ ಮಹಿಳೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಇದೇ ಕಾರಣಕ್ಕೆ ಈ ಕೃತ್ಯವೆಸಗಿರಬಹುದು ಎನ್ನಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :