ಮೋದಿ ವಿರೋಧಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ತೇಜಸ್ವಿ ವಿರುದ್ಧ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು, ಶನಿವಾರ, 30 ಮಾರ್ಚ್ 2019 (09:22 IST)

ಬೆಂಗಳೂರು : ಮೋದಿ ವಿರೋಧಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಸಭೆಯೊಂದರಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ  ತೇಜಸ್ವಿ ಸೂರ್ಯ ಅವರು, ಕಳೆದ 60 ವರ್ಷಗಳಿಂದ ಪ್ರಜೆಗಳಲ್ಲಿರುವ ದೇಶಪ್ರೇಮವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅವರು ದೇಶಪ್ರೇಮಿಗಳಾಗಿದ್ದರೆ ಭಾರತವನ್ನು ಬಡರಾಷ್ಟ್ರವನ್ನಾಗಿ ಇರಲು ಬಿಡುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

 

ಆದರೆ ಈಗ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲರೂ ಒಂದಾಗಿ ನಿಂತಿದ್ದಾರೆ.  ಮೋದಿ ಪರ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ಈ ಹೇಳಿಕೆಯಿಂದ ಗರಂ ಆದ ಕಾಂಗ್ರೆಸ್ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವಿದೆ ಬೆರಳು ತೋರಿಸಿದ್ರೆ ಕತ್ತರಿಸ್ತೇವೆ: ಬಿಜೆಪಿ

ಲಕ್ನೋ: ಬಿಜೆಪಿ ಪಕ್ಷ ಮತ್ತು ಬಿಜೆಪಿ ಸದಸ್ಯರ ವಿರುದ್ಧ ಯಾರಾದರೂ ಬೆರಳು ತೋರಿಸಿದಲ್ಲಿ ಕತ್ತರಿಸಿ ...

news

ಪ್ರಧಾನಿ ಮೋದಿ ವಿರುದ್ಧ ರಮ್ಯಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಯಾಕೆ?

ನವದೆಹಲಿ : ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ...

news

5 ವರ್ಷ ನಾನು ತೇಜಸ್ವಿ ಸೂರ್ಯ ಕೈಯಲ್ಲಿ ನರಳಿದ್ದೇನೆ-ತೇಜಸ್ವಿ ಸೂರ್ಯ ವಿರುದ್ಧ ಯುವತಿಯಿಂದ ಗಂಭೀರ ಆರೋಪ

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ...

news

‘ನನ್ಮಕ್ಳು ಜೆಡಿಎಸ್‍ ನವರನ್ನು ಹೆದರಿಸಬೇಕು,ಅವರು ಕೌರವ ವಂಶಸ್ಥರು- ಮಾಜಿ ಶಾಸಕ ಸುರೇಶ್ ಗೌಡ

ತುಮಕೂರು : ಒಂದೊಂದು ವೋಟು ಕೂಡ ಇಂಪಾರ್ಟೆಂಟ್ ಕಣ್ರೋ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ...