ಸಿಮೆಂಟ್ ಕಾರ್ಖಾನೆಗಳ ವಿರುದ್ಧ ರಾಷ್ಟ್ರೀಯ ಹಸಿರು ಸಮಿತಿ ಗರಂ

ಕಲಬುರಗಿ, ಶನಿವಾರ, 13 ಜುಲೈ 2019 (14:34 IST)

ಸಿಮೆಂಟ್ ಕಂಪನಿಗಳು ಸ್ಥಳೀಯವಾಗಿ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ನಿರ್ವಹಣೆಯ ವೈಜ್ಞಾನಿಕ ವಿಲೇವಾರಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿ ಖಡಕ್ಕಾಗಿ ಆಗಿ ಹೇಳಿದೆ.

ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಸಿಮೆಂಟ್ ಕಂಪನಿಗಳು ಸ್ಥಳೀಯವಾಗಿ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ನಿರ್ವಹಣೆಯ ವೈಜ್ಞಾನಿಕ ವಿಲೇವಾರಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ  ಸುಭಾಷ ಬಿ.ಆಡಿ ಹೇಳಿದ್ರು.

ವಾಡಿ ಸಿಮೆಂಟ್ ಕಾರ್ಖಾನೆಯ ಆಡಳಿತ ಭವನದಲ್ಲಿ ಸಿಮೆಂಟ್ ಉದ್ದಿಮೆದಾರರೊಂದಿಗೆ ಸಭೆ ನಡೆಸಿ ಮಾತನಾಡಿ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಸಿಮೆಂಟ್ ಉತ್ಪಾದನೆಗೆ ಪೂರಕವಾದ ವಾತಾವರಣ ಇಲ್ಲಿದೆ. ವಾಡಿ ಸಿಮೆಂಟ್ ಕಂಪನಿಯಲ್ಲಿ ಸುಮಾರು 5 ಲಕ್ಷ ಟನ್ ಹಳೇ ಕಸ ಸೂಕ್ತ ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿದೆ. ಇದರಲ್ಲಿ ಸುಮಾರು 400 ಟನ್ ಆರ್.ಡಿ.ಎಫ್. ಇಂಧನ ಉತ್ಪಾದನೆಗೆ ಅವಕಾಶಗಳಿದ್ದು, ಕಂಪನಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು.

ವಾಡಿಯಲ್ಲಿ ನೂತನ ಸಿಮೆಂಟ್ ಘಟಕ ಸ್ಥಾಪನೆಯಿಂದ ಆರೋಗ್ಯದ ಸಮಸ್ಯೆಗಳು ಕಾಣುತ್ತಿವೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಇದಲ್ಲದೆ ಪಟ್ಟಣದ ಸರ್ವರ ಆರೋಗ್ಯ ಮುಖ್ಯವಾಗಿದ್ದು, ಸೂಕ್ತ ತಪಾಸಣೆಗೂ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ವಿಶ್ವಾಸಮತ ಯಾಚನೆಯ ಹಿಂದಿದೆ ರಾಜಕೀಯ ಷಡ್ಯಂತ್ರ- ಬಿಎಸ್ ವೈ ಆರೋಪ

ಬೆಂಗಳೂರು : ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿರುವುದರ ಹಿಂದೆ ರಾಜಕೀಯ ...

news

ಸಿಎಂ ಕುಮಾರಸ್ವಾಮಿ, ರೇವಣ್ಣ ವಿರುದ್ಧ ಗರಂ ಆದ ಎಂಟಿಬಿ ನಾಗರಾಜ್. ಕಾರಣವೇನು?

ಬೆಂಗಳೂರು : ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರ ಮನೆಗೆ ಸಚಿವ ಡಿಕೆ ...

news

ರೇವಣ್ಣನ ವಾಮಾಚಾರ ಮಾರ್ಗದಿಂದ ಸರ್ಕಾರ ಉಳಿಯಲ್ಲ ಎಂದ ಬಿಜೆಪಿ ಶಾಸಕ

ಬೆಂಗಳೂರು : ಸರ್ಕಾರ ಉಳಿಸಿಕೊಳ್ಳಲು ಸಚಿವ ರೇವಣ್ಣನ ವಾಮಾಚಾರ ಮಾರ್ಗ ಸಫಲವಾಗುವುದಿಲ್ಲ ಎಂದು ಶಾಸಕ ...

news

ಎಂಟಿಬಿ ನಾಗರಾಜ್ ರಾಜೀನಾಮೆ ಹಿಂದಿದೆಯಂತೆ ಬಿಜೆಪಿ ತಂತ್ರ

ಬೆಂಗಳೂರು : ಸಚಿವ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿರುವುದರ ಹಿಂದೆ ಬಿಜೆಪಿಯ ಮಾಸ್ಟರ್ ಪ್ಲ್ಯಾನ್ ಇದೆ ...