ಬೆಂಗಳೂರಿನ ಮೂವರಲ್ಲಿ ಹೊಸ ಪ್ರಭೇದದ ಕೊರೊನಾ ಪತ್ತೆ

ಬೆಂಗಳೂರು| pavithra| Last Modified ಮಂಗಳವಾರ, 29 ಡಿಸೆಂಬರ್ 2020 (11:23 IST)
ಬೆಂಗಳೂರು : ಮತ್ತೆ ರಾಜ್ಯ ರಾಜಧಾನಿ ಕೊರೊನಾ ಹಾವಳಿ ಶುರುವಾಗಿದ್ದು, ಬೆಂಗಳೂರಿನ ಮೂವರಲ್ಲಿ ಹೊಸ ಪ್ರಭೇದದ ಕೊರೊನಾ ಪತ್ತೆಯಾಗಿದೆ.

ಡಿಸೆಂಬರ್ 19ರಂದು ತಾಯಿ, ಮಗಳು ಸೇರಿ ಮೂವರು ಬ್ರಿಟಿಷ್ ಏರ್ ಲೈನ್ಸ್ ನಲ್ಲಿ ಬೆಂಗಳೂರಿಗೆ ಬಂದಿದ್ದರು. ಭಾರತಕ್ಕೆ ಬರುವ ವೇಳೆ ಕೊವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಬಳಿಕ ತಾಯಿ, ಮಗಳಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನಲೆಯಲ್ಲಿ ಬಿಬಿಎಂಪಿ ಕೊವಿಡ್ ಟೆಸ್ಟ್ ಮಾಡಿಸಿದೆ. ಇಬ್ಬರ ಕೊವಿಡ್ ಮಾದರಿ ಜೆನೆಟಿಕ್ ಟೆಸ್ಟ್ ಗೆ ರವಾನೆ ಮಾಡಲಾಗಿದೆ. ಸಂಜೆಯ ವೇಳೆ ಮಾದರಿ ವರದಿ ಬರಲಿದೆ ಎನ್ನಲಾಗಿದೆ. ಸದ್ಯ ತಾಯಿ, ಮಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :