ಬಿಜೆಪಿಯಲ್ಲಿ ಗೊಂದಲ ಇಲ್ಲ: ಕೋಟಾ ಶ್ರೀನಿವಾಸ ಪೂಜಾರಿ

bengaluru| geethanjali| Last Modified ಭಾನುವಾರ, 25 ಜುಲೈ 2021 (20:07 IST)
ಸ್ವಾಭಾವಿಕವಾಗಿ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳೂರಲ್ಲಿ ಮಾಧ್ಯಮದವ್ರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪಕ್ಷವನ್ನ ಮಾತೃ ಸಮಾನವಾಗಿ ನೋಡಿಕೊಂಡು ಪಕ್ಷದ ಹಿರಿಯರ ಸೂಚನೆ ಪ್ರಕಾರ ನಡೆದುಕೊಳ್ತೇನೆ ಅಂದಿದ್ದಾರೆ. ಇದು ದೇಶಕ್ಕೆ ಮತ್ತು ರಾಜ್ಯಕ್ಕೆ ಮಾದರಿಯಾಗಬಲ್ಲ ಕಾರ್ಯಕರ್ತನ ಮಾತು. ಕಾಲಕಾಲಕ್ಕೆ ಹೈಕಮಾಂಡ್ ನಿಂದ ಬರೋ ಸೂಚನೆ ಪಾಲಿಸೋದಾಗಿ ಹೇಳಿದ್ದಾರೆ.
ಮುಂದಿನದ್ದನ್ನ ಸಿಎಂ, ರಾಷ್ಟ್ರೀಯ ಅಧ್ಯಕ್ಷರು
ಮತ್ತು ರಾಜ್ಯಾಧ್ಯಕ್ಷರು ನಿರ್ಧಾರ ಮಾಡ್ತಾರೆ ಎಂದರು.
ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಹೆಸರು ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಾದ್ರೂ ಏನಾದ್ರೂ ಹೇಳಬಾರದು ಅನ್ನೋದು ಏನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಗೌರವಿಸಬೇಕಿದೆ. ಸಾಮಾನ್ಯ ಕಾರ್ಯಕರ್ತನಾಗಿ ನನ್ನಂತಹವರು ಪಕ್ಷದ ಹಿರಿಯರು ಹೇಳಿದ್ದನ್ನು ಕೇಳ್ತೇವೆ. ಯಾರೂ ಏನೇ ಹೇಳಿದರೂ ಪ್ರಜಾಪ್ರಭುತ್ವದಲ್ಲಿ ಗೌರವಿಸುತ್ತೇನೆ ಎಂದರು
ಇದರಲ್ಲಿ ಇನ್ನಷ್ಟು ಓದಿ :