ನೈಟ್ ಕರ್ಪ್ಯೂ ಹಿಂಪಡೆಯಲು ವಿಪಕ್ಷಗಳೇ ಕಾರಣ ಎಂದ ಆರೋಗ್ಯ ಸಚಿವರು

ಬೆಂಗಳೂರು| pavithra| Last Modified ಗುರುವಾರ, 31 ಡಿಸೆಂಬರ್ 2020 (12:36 IST)
ಬೆಂಗಳೂರು : ನೈಟ್ ಕರ್ಪ್ಯೂ ಹಿಂಪಡೆಯಲು ವಿಪಕ್ಷಗಳೇ ಕಾರಣ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಟ್ ಕರ್ಪ್ಯೂ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ್ಲ ಇಲ್ಲ. ವಿಪಕ್ಷಗಳ ಮಾತು ಕೇಳಿ ನೈಟ್ ಕರ್ಪ್ಯೂ ಹಿಂಪಡೆದಿದ್ದೇವೆ ಎಂದು ಹೇಳಿದ್ದಾರೆ.

ಬ್ರಿಟನ್ ನಿಂದ ಹಿಂದಿರುಗಿದ 30 ಜನರಿಗೆ ಕೊರೊನಾ ಹಾಗೂ ಅವರ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅವರಲ್ಲಿ 7 ಜನರಿಗೆ ಮಾತ್ರ ಹೊಸ ಪ್ರಭೇದದ ಕೊರೊನಾ ಕಾಣಿಸಿಕೊಂಡಿದೆ. 34 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಅವರಲ್ಲಿ ಯಾರಿಗೂ ಗಂಭೀರ ಸಮಸ್ಯೆ ಇಲ್ಲ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರ ಮೇಲೆ ನಿಗಾವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :