ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನ ಚಳಿ ಬಿಡಿಸಿದ ಪೋಷಕರು

ಕಲಬುರಗಿ| pavithra| Last Updated: ಗುರುವಾರ, 7 ನವೆಂಬರ್ 2019 (10:34 IST)
ಕಲಬುರಗಿ : ಉಪನ್ಯಾಸಕನೊಬ್ಬ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಪಾಠ ಮಾಡುವ ಬದಲು ನೀಡಿದ ಘಟನೆ ಕಲಬುರಗಿ ಶರಣಬಸವ  ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
> > ಚಿನ್ನು ಬಿರಾಜಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ. ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕನಾಗಿರುವ ಈತ ವಿದ್ಯಾರ್ಥಿನಿಯರ ಬಳಿ ಮೊಬೈಲ್ ನಂಬರ್ ಪಡೆದು ಅಸಭ್ಯ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.


ಈ ಹಿನ್ನಲೆಯಲ್ಲಿ  ವಿದ್ಯಾರ್ಥಿನಿಯರ ಪೋಷಕರಿಗೆ ಈ ವಿಚಾರ ತಿಳಿದು  ಕಾಲೇಜಿಗೆ ಬಂದು ಉಪನ್ಯಾಸಕನ ಚಳಿ ಬಿಡಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ಉಪನ್ಯಾಸಕ ಚಿನ್ನು ಕ್ಷಮೆ ಕೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೇ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆತನನ್ನು ಕೆಲಸದಿಂದ ಅಮಾನತು ಮಾಡಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :