ಮಳೆಯಾಗದ ಹಿನ್ನಲೆಯಲ್ಲಿ ಕೆರೆಗಳು ಖಾಲಿ ಖಾಲಿಯಾಗಿದ್ದು, ಜನರು ಜೀವದ ಹಂಗು ತೊರೆದು ಜೀವಜಲಕ್ಕಾಗಿ ಹೋರಾಟ ನಡೆಸಿದ್ದಾರೆ.ಬರಗಾಲದಲ್ಲಿ ನೀರಿಗಾಗಿ ಜನರು ಹಾಹಾಕಾರ ನಡೆಸಿದ್ದಾರೆ. ಬೀದರ್ ನ ಹೀರೆನಾಗಾಂವದಲ್ಲಿ ಬತ್ತಿದ ಕೆರೆ, ಕೊಳವೆ ಬಾವಿಗಳಿಂದಾಗಿ ನೀರಿಗಾಗಿ ಗ್ರಾಮಸ್ಥರ ಪರದಾಟ ಮುಂದುವರಿದಿದೆ.ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಬಾವಿಗೆ ನೀರು ಬಿಡುತ್ತಿದ್ದಾರೆ ಗ್ರಾಮ ಪಂಚಾಯತ್ ನವರು.44° ರಣ ಬಿಸಿಲಿನಲ್ಲಿ ಜೀವದ ಹಂಗು ತೊರೆದು ನೀರು ತುಂಬಲು ಮಹಿಳೆಯರು ಪರದಾಟ ನಡೆಸ್ತಿದ್ದಾರೆ.