ಆಪರೇಶನ್ ಕಮಲದ ಹಿಂದೆ ಪ್ರಧಾನಿ ಮೋದಿ ಕೈವಾಡವಿಲ್ಲ - ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಮಂಗಳವಾರ, 5 ಫೆಬ್ರವರಿ 2019 (13:01 IST)

ಬೆಂಗಳೂರು : ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿರುವ ಆಪರೇಶನ್ ಕಮಲದ ಹಿಂದೆ ಪ್ರಧಾನಿ ನರೇಂದ್ರ ಮೋದಿಯ ಕೈವಾಡವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು 'ಕೇವಲ 3 ದಿನ ಸಿಎಂ ಆಗಿದ್ದ ಯಡಿಯೂರಪ್ಪ ಗೆ ನೋವಿದೆ. ಹೀಗಾಗಿ, ಅಧಿಕಾರಕ್ಕಾಗಿ ಸ್ವಲ್ಪ ಪ್ರಯತ್ನ ನಡೆಸಿದ್ದಾರೆ. ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಆಪರೇಷನ್‌ ಕಮಲದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಾತ್ರವಿದೆ ಎಂದು ನನಗನಿಸುತ್ತಿಲ್ಲ’ ಎಂದು ಹೇಳಿದ್ದಾರೆ.


'ಆಪರೇಷನ್‌ ಕಮಲಕ್ಕಾಗಿ ಶಾಸಕರಿಗೆ ತಲಾ 50 ಕೋಟಿ ರೂ. ಆಮಿಷ ನೀಡಲಾಗುತ್ತಿದೆ. ಮೈತ್ರಿ ಸರಕಾರ ಕೆಡವಿ ಹೊಸ ಸರಕಾರ ರಚಿಸುವ ಕನಸು ಕಾಣುತ್ತಿರುವ ಬಿಜೆಪಿಯ ಸ್ಥಳೀಯ ಮುಖಂಡರಿಗೆ ಇಷ್ಟೊಂದು ಕೋಟಿ ಕೋಟಿ ದುಡ್ಡು ಎಲ್ಲಿಂದ ಬಂತು ಎಂಬುದೇ ಅರ್ಥವಾಗುತ್ತಿಲ್ಲ,'ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
                                                                                                      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮನಸ್ಸಿದ್ದರೆ ಯಾವ ಕಾಯಿಲೆಯನ್ನು ಬೇಕಾದರೂ ಗೆಲ್ಲಬಹುದು-ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಗೋವಾ ಸಿಎಂ ಟ್ವೀಟ್

ಪಣಜಿ : ಮೆದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ...

news

ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿದರೆ ಉತ್ತಮ

ಬೆಂಗಳೂರು : ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಹೆಚ್ಚಿನವರು ಶೀತ-ಕೆಮ್ಮು, ಕಫ, ಜ್ವರ, ಚರ್ಮ ...

news

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾದ್ರಿಗಳು

ಮೈಸೂರು : ಮೂವರು ಪಾದ್ರಿಗಳು ಅಪ್ರಾಪ್ತ ಬಾಲಕಿಯೊಬ್ಬಳಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಆಕೆಯ ...

news

ಅಡುಗೆ ಮಾಡಿಲ್ಲವೆಂದು ಮಗುವಿಗೆ ಹಾಲು ಕುಡಿಸುತ್ತಿದ್ದ ಸೊಸೆಗೆ ಅತ್ತೆ ಮಾಡಿದ್ದೇನು ಗೊತ್ತಾ?

ಲಕ್ನೋ : ಅಡುಗೆ ಮಾಡುವುದು ತಡ ಮಾಡಿದ್ದಕ್ಕೆ ಅತ್ತೆಯೊಬ್ಬಳು ಮಗುವಿಗೆ ಹಾಲು ಕುಡಿಸುತ್ತಿದ್ದ ಸೊಸೆಯ ...