ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಅಭಿಮಾನಿಗಳಿಂದ ಒಂಟೆ ಮೇಲೆ ಮೆರವಣಿಗೆ

ಬೆಳಗಾವಿ| Krishnaveni K| Last Modified ಶುಕ್ರವಾರ, 18 ಜೂನ್ 2021 (09:35 IST)
ಬೆಳಗಾವಿ: ರಾಸಲೀಲೆ ವಿಡಿಯೋದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ ನೀಡಿ ಎಂದು ಅವರ ಅಭಿಮಾನಿಗಳು ಒಂಟೆ ಮೇಲೆ ಮೆರವಣಿಗೆ ಮಾಡಿದ್ದಾರೆ.  
> ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ರಮೇಶ್ ಜಾರಕಿಹೊಳಿ ಬೆಂಬಲಿಗರು, ಹಿತೈಷಿಗಳು ಒಂಟೆ ಮೆರವಣಿಗೆ ಮಾಡಿ ತಮ್ಮ ಬೇಡಿಕೆ ಮಂಡಿಸಿದ್ದಾರೆ.>   ರಮೇಶ್ ಜಾರಕಿಹೊಳಿಯವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮನೆ ಮಾತಾಗಿದ್ದ ರಮೇಶ್ ಜಾರಕಿಹೊಳಿಯವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :