ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿರುವ ಘಟನೆಗೆ ಬಿಜೆಪಿಯ ಶ್ರೀ ರಾಮುಲು ಗರಂ ಆಗಿದ್ದಾರೆ. ಸಿದ್ದರಾಮಯ್ಯ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ದೂರಿದ್ದಾರೆ.ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದು, ಚಿತ್ರದುರ್ಗದಲ್ಲಿ ಜಿಪಂ ತ್ರೈಮಾಸಿಕ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾತನಾಡಿ, ರಾವಣಾಸುರನಲ್ಲಿರೋ ಎಲ್ಲಾ ಗುಣಗಳು ಸಿದ್ದರಾಮಯ್ಯನ ಬಳಿ ಇವೆ. ಹತ್ತಿರದಿಂದ ನೋಡಿದವರು ಯಾರು ಸಿದ್ದರಾಮಯ್ಯನ್ನ ಒಪ್ಕೊಳ್ಳುವ ಪ್ರಶ್ನೆಯಿಲ್ಲ. ಮಹಿಳೆಯರ ಮೇಲೆ ಗೌರವ, ಪ್ರಮಾಣಿಕತೆ ತೋರುವ ನಡುವಳಿಕೆಯ ವ್ಯಕ್ತಿತ್ವ ಅವರಲ್ಲಿ ಇಲ್ಲ