ಬೆಂಗಳೂರು|
Krishnaveni K|
Last Modified ಬುಧವಾರ, 3 ಅಕ್ಟೋಬರ್ 2018 (16:15 IST)
ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಜವಾಬ್ಧಾರಿಗೆ ಇತ್ತೀಚೆಗಷ್ಟೇ ಕತ್ತರಿ ಹಾಕಲಾಗಿತ್ತು. ಇದೀಗ ಸಂಪೂರ್ಣವಾಗಿ ಅವರನ್ನು ಈ ಹುದ್ದೆಯಿಂದ ಹೊರಗಿಡಲಾಗುತ್ತಾ?
ಹಾಗೊಂದು ಸುದ್ದಿ ಹರಿದಾಡಿತ್ತು. ಅದಕ್ಕೆ ಕಾರಣ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮ್ಮ ಬಗ್ಗೆ ಬರೆದುಕೊಂಡ ಸ್ವ ವಿವರವನ್ನು ಅಳಿಸಿ ಹಾಕಿದ್ದು. ಆದರೆ ಇದೀಗ ರಮ್ಯಾ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
‘ಈ ವದಂತಿಗಳೆಲ್ಲಾ ಶುದ್ಧ ಸುಳ್ಳು. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ಇತ್ತೀಚೆಗಷ್ಟೇ ರಮ್ಯಾ ಪ್ರಧಾನಿ ಮೋದಿಯವರನ್ನು ‘ಚೋರ್’ ಎಂದು ಅವಹೇಳನ ಮಾಡಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿತ್ತು.
ಇಂತಹ ಹಲವು ವಿವಾದಗಳು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ರಮ್ಯಾ ಮೈಮೇಲೆ ಎಳೆದುಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಕಿತ್ತು ಹಾಕಲಾಗಿದೆ ಎಂಬ ಸುದ್ದಿ ಹಬ್ಬಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.