ಜನರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಖದೀಮರಿಗೆ ಪೊಲೀಸರು ನೀಡಿದ್ರು ಶಾಕ್

ಬಾಗಲೂರು, ಮಂಗಳವಾರ, 2 ಜುಲೈ 2019 (16:31 IST)

ಫೋನ್ ನಲ್ಲಿ ಮಾತನಾಡುತ್ತಿದ್ದವರಿಗೆ ಬೈಕ್ ನಲ್ಲಿ ಬಂದು ಚಳ್ಳೆ ಹಣ್ಣು ತಿನ್ನಿಸಿ ಮೊಬೈಲ್ ಎಗರಿಸುತ್ತಿದ್ದ ಚಾಲಾಕಿ ಖದೀಮರಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ಬೈಕಿನಲ್ಲಿ ಬಂದು ಸಾರ್ವಜನಿಕರ ಮೊಬೈಲ್ ಫೋನ್‌ಗಳನ್ನು‌ ಸುಲಿಗೆ ಮಾಡುತ್ತಿದ್ದ ಕಳ್ಳರ ತಂಡವೊಂದನ್ನು ಹಿಡಿಯುವಲ್ಲಿ ಬಾಗಲೂರು ಪೋಲೀಸರು ಯಶಸ್ವಿಯಾಗಿದ್ದಾರೆ. ಸಾಯಿಕೃಷ್ಣ, ರಾಜಶೇಖರ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳಾಗಿದ್ದಾರೆ.

ಜನರಿಗೆ ಚಳ್ಳೆ ಹಣ್ಣು ತಿನಿಸುವ ಕಳ್ಳರಿಗೆ ಪೊಲೀಸರೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ನಿತ್ಯ ಬೈಕ್ ನಲ್ಲಿ ಸಂಚರಿಸುತ್ತಾ ಕಳ್ಳತನದಲ್ಲಿ ತೊಡಗಿದ್ದರು. ಸಮಯ ಸಾಧಿಸಿ ಮೊಬೈಲ್ ಗಳನ್ನು ಸುಲಿಗೆ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬಂಧಿತರಿಂದ ಆರು ಆ್ಯಂಡ್ರಾಯ್ಡ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ನಾಚಿಕೆ, ಬುದ್ಧಿಯಿಲ್ಲದೇ ಸರಕಾರ ನಡೆಸಿದ್ರೆ ನಾವೇನ್ ಮಾಡೋಣ?

ನಾಚಿಕೆ, ಬುದ್ಧಿ ಇಲ್ಲದೇ ಮುಖ್ಯಮಂತ್ರಿ ಸರಕಾರವನ್ನು ನಡೆಸಿದರೆ ನಾವೇನು ಮಾಡಬೇಕು? ಹೀಗಂತ ಕಮಲ ಪಾಳೆಯದ ...

news

ವಿವಾಹಿತೆಗೆ ಕೈಕೊಟ್ಟ ಪ್ರಿಯಕರ; ರೊಚ್ಚಿಗೆದ್ದವಳು ಹೀಗೆ ಮಾಡೋದಾ?

ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವಿವಾಹಿತೆಯನ್ನು ಬೇರೊಬ್ಬ ಮದುವೆಯಾಗಿ ಪುಸಲಾಯಿಸಿ ಕರೆದುಕೊಂಡು ಬಂದು ಕೈ ...

news

'ಸಚಿವ ಜಮೀರ್ ಗೆ ಲಾಕಪ್ ನಲ್ಲಿ ಹಾಕಿ ಒದಿಬೇಕು'

ಬಸ್ ಸ್ಟಾಂಡ್ ನಲ್ಲಿ ಪಿಕ್ ಪಾಕೇಟ್ ಮಾಡುವವರನ್ನ ಲಾಕಪ್ ನಲ್ಲಿ ಹಾಕಿ ಹೊಡೆದು ವಸೂಲಿ ಮಾಡ್ತಾರೆ. ಹಾಗೇ ...

news

ಕಾಡು ಬಿಟ್ಟಿರುವ ಆನೆಗಳು ಬಂದಿದ್ದು ಎಲ್ಲಿಗೆ?

ಆಹಾರ ಹಾಗೂ ನೀರನ್ನು ಅರಸುತ್ತಾ ಕಾಡಾನೆಗಳು ಬಂದಿರುವುದರಿಂದ ಅಲ್ಲಿನ ಜನರು ಭಯ ಭೀತರಾಗಿದ್ದಾರೆ.