ಸಿದ್ದರಾಮಯ್ಯ ಚೇಲಾಗಳು ಸೋಬಾನೆ ಪದ ಹಾಡುತ್ತಿದ್ದಾರಂತೆ…

ಹುಬ್ಬಳ್ಳಿ, ಬುಧವಾರ, 15 ಮೇ 2019 (15:04 IST)

ಮತ್ತೊಮ್ಮೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕಾಗಿ ಅವರ ಚೇಲಾಗಳು ಸೋ… ಅಂತ ಸೋಬಾನೆ ಪದ ಹಾಡುತ್ತಿದ್ದಾರಂತೆ.

ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಹಿರಿಯ ಮುಖಂಡ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ನ ಎಲ್ಲ ಮುಖಂಡರು ನರಸತ್ತವರು ಎಂದು ಪುನರುಚ್ಛರಿಸಿದ ಅವರು, ಸಿಎಂ ಆಗೋ ಸನ್ನಿವೇಶ ಈಗಿಲ್ಲ. ಆದರೂ ಸಿದ್ದರಾಮಯ್ಯರ ಚೇಲಾಗಳು ಸೋಬಾನೆ ಹಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ ಕೆ.ಎಸ್.ಈಶ್ವರಪ್ಪ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ಎಲ್ಲ ಗೊತ್ತಿದ್ರೂ ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಖರ್ಗೆಯವರು ಸೈಲೆಂಟ್ ಯಾಕಿದ್ದಾರೆ ಎಂದು ಪ್ರಶ್ನಿಸಿದ್ರು.

ಮೇ 23 ರ ನಂತರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಟೀಕೆ ಮಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆಚ್.ವಿಶ್ವನಾಥ್ ಗೆ ಬಾಯಿಚಪಲ; ಏನೇನೋ ಮಾತಾಡ್ತಾರೆ…

ಜೆಡಿಎಸ್ ನ ರಾಜ್ಯ ಅಧ್ಯಕ್ಷರಾಗಿರುವ ಹೆಚ್.ವಿಶ್ವನಾಥ್ ವಿರುದ್ಧ ಸಚಿವರೊಬ್ಬರು ಖಾರವಾಗಿ ಟಾಂಗ್ ...

news

ಈಶ್ವರಪ್ಪಗೆ ಗಂಡಸ್ತನದ ಬಗ್ಗೆ ಗೊತ್ತಿಲ್ಲ ಎಂದ ಸಂಸದ

ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪಗೆ ಕೈ ಪಡೆಯ ಸಂಸದ ಖಡಕ್ ಟಾಂಗ್ ನೀಡಿದ್ದಾರೆ.

news

ಸಿಎಂ ರಾಜೀನಾಮೆ ನೀಡಲಿ; ಖರ್ಗೆ ಸಿಎಂ ಆಗಲಿ ಎಂದ ಯಡಿಯೂರಪ್ಪ

ಕಲಬುರಗಿ ಉಪ ಚುನಾವಣೆಯಲ್ಲಿ ರಣ ಕಣ ತಾರಕಕ್ಕೇ ಏರುತ್ತಿದೆ. ಏತನ್ಮಧ್ಯೆ ಮಾಜಿ ಹಾಗೂ ಹಾಲಿ ಸಿಎಂಗಳ ನಡುವಿನ ...

news

ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿಯಲ್ಲಿ ಕುರುಬರು ಸೋಲಿಸಿದ್ರಾ?

ಕುರುಬರು ದಡ್ಡರು ಅಂತ ಬಹಳ ಜನ ತಿಳಿದುಕೊಂಡಿದ್ದಾರೆ. ಅದೇ ಕುರುಬರು, ದಲಿತರು ಚಾಮುಂಡೇಶ್ವರಿಯಲ್ಲಿ ...