ಬೆಂಗಳೂರು: ನವಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಗೆ ಇಂದು ಗಣಿ ನಾಡು ಬಳ್ಳಾರಿಯಲ್ಲಿ ಸಿದ್ದರಾಮಯ್ಯ ಮತ್ತು ಬಿ ಶ್ರೀರಾಮುಲು ನಡುವೆ ಭರ್ಜರಿ ಪ್ರಚಾರದ ಫೈಟ್ ನಡೆಯಲಿದೆ.ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಪರ ಶಾಸಕ ಬಿ ಶ್ರೀರಾಮುಲು ಇಂದು ಮತ ಯಾಚನೆ ನಡೆಸಲಿದ್ದಾರೆ. ಇನ್ನೊಂದೆಡೆ ಮತ್ತೆ ಬಳ್ಳಾರಿಗೆ ಕಾಲಿಟ್ಟಿರುವ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಮತ ಯಾಚನೆ ಮಾಡಲಿದ್ದಾರೆ.ಸಿದ್ದರಾಮಯ್ಯಗೆ ರಾಜಕೀಯವಾಗಿ ಮರು ಜೀವ ಕೊಟ್ಟ ನಾಡು ಗಣಿ ನಾಡು.